ವಿಜಯ ಸಂಘರ್ಷ
ಭದ್ರಾವತಿ : ಇಂದಿನ ದಿನಗಳಲ್ಲಿ ಹಣವಿದ್ದವರೂ ಮಾಡಲಾಗದಂತಹ ಸಮಾಜ ಸೇವಾ ಕಾರ್ಯಗಳನ್ನು ಪೊಲೀಸ್ ಉಮೇಶ್‌ರವರು ಕೈಗೊಳ್ಳುವ ಮೂಲಕ ಉಳ್ಳವರಿಗೆ ಮಾದರಿಯಾಗಿದ್ದಾರೆಂದು ಚಿಕ್ಕಮಗ ಳೂರು ಮೂಡಿಗೆರೆ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ಸಮಾಜ ಸೇವಕ ರುದ್ರೇಶ್ ಕಹಳೆ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಭಾನುವಾರ ನಗರದ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ ಸಮಾಜ ಸೇವಕ, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್‌ರವರ 49 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಹುಟ್ಟುಹಬ್ಬ ಆಚರಣೆಯನ್ನು ವಿಶೇಷ ವಾಗಿ ಆಚರಿಸಿಕೊಳ್ಳುವ ಮೂಲಕ ಪೊಲೀಸ್ ಉಮೇಶ್‌ರವರು ಮಾದರಿ ಯಾಗಿದ್ದಾರೆ. ಸದಾ ಸೇವಾಕಾರ್ಯ ಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸೇವಾ ಕಾರ್ಯಗಳು ಸಮಾಜ ದಲ್ಲಿ ಇವರಿಂದ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷೆ ಹಾಗೂ ಸುರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮ ಶೇಖರ್, ಪೊಲೀಸ್ ಉಮೇಶ್‌ರವರ ಸೇವಾ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಗಣ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳಿಂದ ಪೊಲೀಸ್ ಉಮೇಶ್‌ರವರನ್ನು ಅಭಿನಂದಿಸ ಲಾಯಿತು. ಉಮೇಶ್ ಹುಟ್ಟುಹಬ್ಬದ ಅಂಗವಾಗಿ ಬಡಮಕ್ಕಳಿಗೆ ಉಚಿತ ವಾಗಿ ಶಾಲಾ ಬ್ಯಾಗ್, ಬರವಣಿಗೆ ಪುಸ್ತಕ ಮತ್ತು ಹಿರಿಯ ನಾಗರೀಕರಿಗೆ ಕನ್ನಡಕ ಹಾಗು ಮಹಿಳೆಯರಿಗೆ ಸ್ವೆಟರ್ ಮತ್ತು ನಿರಾಶ್ರಿತರಿಗೆ ಕಂಬಳಿ ವಿತರಿಸಲಾಯಿತು.
ಮಹಾಮಾರಿ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕಡುಬಡವರಿಗೆ ದವಸ ಧಾನ್ಯ ವಿತರಣೆ, ಪ್ರತಿದಿನ ಆಹಾರ ಪೂರೈಕೆ, ದೇವಸ್ಥಾನಗಳ ಸಭೆ- ಸಮಾರಂಭಗಳಲ್ಲಿ ಉಚಿತ ಅನ್ನ ದಾಸೋಹ ಸೇರಿದಂತೆ ಇನ್ನಿತರ ಸೇವಾಕಾರ್ಯಗಳನ್ನು ಹಲವಾರು ವರ್ಷಗಳಿಂದ ಪೊಲೀಸ್ ಉಮೇಶ್ ರವರು ಸ್ನೇಹ ಜೀವಿ ಬಳಗದ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.
ಅಲ್ಲದೆ ಕಳೆದ ಮೂರು ವರ್ಷಗಳ ಹಿಂದೆ ರೋಗಿಗಳಿಗೆ ಪ್ರತ್ಯೇಕವಾಗಿ ಆಂಬುಲೆನ್ಸ್ ಉಚಿತ ಸೇವೆಗೆ ಸಮರ್ಪಸುವ ಮೂಲಕ ಅದೆಷ್ಟೋ ಬಡ ಮತ್ತು ಮಧ್ಯಮ ವರ್ಗದವರ ಪ್ರೀತಿ ಪಾತ್ರರಾಗಿ ಜನಾನುರಾಗಿ ಉಳಿದಿದ್ದಾರೆ. ಇವರ ಸೇವೆಗೆ ಮತ್ತಷ್ಟು ಅವಕಾಶ ಸಿಗುವಂತಾಗಲಿ ಎಂದು ಶುಭ ಹಾರೈಸಲು ಆಗಮಿಸಿದ್ದ ಅಭಿಮಾನಿಗಳು ಕೊರಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795