ವಿಜಯ ಸಂಘರ್ಷ
ಭದ್ರಾವತಿ : ತಾಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆರ್.ಎನ್. ರುದ್ರೇಶ ಕೂಡ್ಲಿಗೆರೆ ಸರ್ವನುಮತದಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷರಾದ ನಾಗರಾಜ ಗೌಡ್ರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಚುನಾವಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮಪಂಚಾ ಯತ್ ಅಧ್ಯಕ್ಷೆ ಪಾರ್ವತಿ ಬಾಯಿ, ಮಾಜಿ ಅಧ್ಯಕ್ಷ ಜಯಣ್ಣ, ಮಲ್ಲಕ್ ಬಿ ವೀರಪ್ಪನ್, ಉಮಾದೇವಿ ತಿಪ್ಪೇಶ್, ಮಾಜಿ ಉಪಾಧ್ಯಕ್ಷ ಕುಬೇರ್ ನಾಯ್ಕ, ನಾಗರಾಜ್ ಗೌಡ್ರು, ಸದಸ್ಯರಾದ ವಿಶ್ವನಾಥ, ಸ್ವಾಮೀನಾಥನ್, ಸಿದ್ದಮ್ಮ ನಾಗೇಶ್ ,ಗೌರಮ್ಮ ಮಹಾದೇವ , ನೀಲಬಾಯಿ ಚಂದ್ರನಾಯಕ್ , ಭಾಗ್ಯಮ್ಮ ರಾಮಚಂದ್ರ, ಅರಕೆರೆ ಲಕ್ಷ್ಮೀಪತಿ, ವೀ ಎಸ್ ಎಸ್ ಎನ್ ಅಧ್ಯಕ್ಷರಾದ ಎನ್.ಎಚ್. ಮಹೇಶ್ವ ರಪ್ಪ, ಪರಮೇಶ್ವರಪ್ಪ, ಕೂಡ್ಲಿಗೆರೆ ಕಲ್ಪನಹಳ್ಳಿ ಕೋಡಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ಶುಭಕೋರಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795