ವಿಜಯ ಸಂಘರ್ಷ
ಭದ್ರಾವತಿ : ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡಾ: ಎಸ್ ಕೃಷ್ಣ ರವರು ಸೋಮವಾರ
ಗ್ರಾಮಾಂತರ ಭಾಗದ ನಿಧಿಗೆ, ಸೋಗಾನೆ, ಕಾಚಿನಕಟ್ಟೆ, ಕೊರ್ಲಹಳ್ಳಿ, ದೊಡ್ಡಿ ಬೀಳು ಹಾಗೂ ಲಕ್ಕಿನಕೊಪ್ಪ ಕ್ಯಾಂಪ್ ನ ಸುತ್ತ ಮುತ್ತ ಪ್ರದೇಶ ಗಳಲ್ಲಿ ಸಂಚರಿಸಿ, ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ಜನ ಪರ ಯೋಜನೆ ಕುರಿತು ಸಾರ್ವಜನಿ ಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳ ಕುರಿತು ಕಿಡಿಕಾರಿದರು.
ಬಡವರ್ಗ, ಸಾಮಾನ್ಯರು ಬದುಕುವ ಸ್ಥಿತಿ ದುಸ್ತರವಾಗಿದೆ. ಒಂದೆಡೆ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತಾವೆಲ್ಲರೂ ಕೈಜೋಡಿಸಿ ಯುವಕರಿಗೆ ಅಧಿಕಾರ ನೀಡಲು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಟಿ. ವಿ. ಗೋವಿಂದಸ್ವಾಮಿ ಸೇರಿದಂತೆ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
9743225795