ಎನ್‌ಟಿಬಿ ಕಛೇರಿ ಮೆಸ್ಕಾಂ ಪಾವತಿ ಕೇಂದ್ರ ಸ್ಥಗಿತ ಆದೇಶ ಹಿಂಪಡೆಯಲಿ

 ವಿಜಯ ಸಂಘರ್ಷ



ಭದ್ರಾವತಿ: ನಗರದ ಜನ್ನಾಪುರ ನಗರಸಭೆ ಶಾಖಾ ಕಛೇರಿ(ಎನ್‌ಟಿಬಿ ಕಛೇರಿ) ಹಾಗು ಉಂಬ್ಳೆಬೈಲು ರಸ್ತೆ, ಮೆಸ್ಕಾಂ ಘಟಕ-2 ಕಛೇರಿ ಆವರಣ ದಲ್ಲಿರುವ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ಜ.1 ರಿಂದ ಸ್ಥಗಿತ ಗೊಳಿಸಲು ಮೆಸ್ಕಾಂ ಹೊರಡಿಸಿರುವ ಆದೇಶ ರದ್ದುಪಡಿಸಲು ಆಗ್ರಹಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದ ನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಉಪ ವಿಭಾಗ ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್‌ ರವರಿಗೆ ಮನವಿ ಸಲ್ಲಿಸಲಾಯಿತು.


ಈ ಹಿಂದೆ ಅಂದಿನ ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದ ಪರಿಣಾಮ ನ್ಯೂಟೌನ್ ಭಾಗದ ಜನ್ನಾಪುರ, ಹುತ್ತಾಕಾಲೋನಿ, ಸಿದ್ದಾಪುರ, ಹೊಸೂರು ತಾಂಡ ಹಾಗು ನ್ಯೂಟೌನ್ ಭಾಗದ ಸ್ಲಂ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು 40 ವರ್ಷಗಳ ಹಿಂದೆ ನಗರಸಭೆ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿ ಪಾವತಿ ಕೇಂದ್ರ ಆರಂಭಿಸಲಾಯಿತು. ನಂತರ ದಿನ ಗಳಲ್ಲಿ ಎನ್‌ಟಿಬಿ ಕಛೇರಿಯಲ್ಲಿ ಉಚಿತವಾಗಿ ಕೊಠಡಿಯನ್ನು ಸಹ ನೀಡಲಾಯಿತು. ಅಲ್ಲದೆ ಸಾರ್ವಜನಿಕ ರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಸಂಬಂಧ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ ರವರು ಶೆಲ್ಟರ್ ಸಹ ನಿರ್ಮಿಸಿ ಕೊಟ್ಟಿದ್ದಾರೆ. ಇದೀಗ ಈ ಕೇಂದ್ರವನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿ ರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.


ಪ್ರಮುಖರಾದ ಆರ್. ವೇಣು ಗೋಪಾಲ್,ರಮಾವೆಂಕಟೇಶ್, ದೇವಿಕಾನಾಗರಾಜ್, ಪಂಕಜಾ ನಟರಾಜ್, ವೇದಾ ಬಸವರಾಜ್, ಗೀತಾ, ಸುಜಾತ, ಲತಾ, ರಾಧಾ, ಇಂದ್ರಾಣಿ, ಶೈಲಜಾಮಹೇಶ್, ಶ್ರೀಲಕ್ಷ್ಮೀ, ಜಯಶ್ರೀ, ಬಿ.ವಿ ಶಶಿಕಲಾ, ಗೋಪಿ ಎಲೆಕ್ಟ್ರಿಕಲ್, ಆರ್. ಮುರು ಗೇಶ್, ಎಂ.ವಿ.ಚಂದ್ರಶೇಖರ್, ಎ. ವಿಶ್ವೇಶ್ವರರಾವ್, ಬಿ.ಎಸ್ ನವಾದ್, ಎಚ್.ಎನ್ ದಿನೇಶ್, ಜಾನ್ಸನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು