ವಿಇಎಸ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನೋತ್ಸವ

 ವಿಜಯ ಸಂಘರ್ಷ



ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶೇಶ್ವ ರಾಯ ವಿದ್ಯಾಸಂಸ್ಥೆಯಲ್ಲಿಂದು ಸ್ವಾಮಿ ವಿವೇಕಾನಂದ ರವರ 160ನೇ ಜನ್ಮದಿನೋತ್ಸವವನ್ನು ಸ್ವಾಮಿ ವಿವೇಕಾನಂದ ಜಾಗೃತ ಬಳಗ (ಡಿವೈನ್ ಪಾರ್ಕ್ ಡಿವೈನ್ ಸ್ಪಾರ್ಕ್ ) ಸಂಸ್ಥೆಯ ಸಹಯೋಗದೊಂದಿಗೆ ಯುವ ದಿನವನ್ನು ಆಚರಿಸಲಾಯಿತು. 


ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ  ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಸಿದ್ದಬಸಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರ ಪ್ಪ, ಸಂಸ್ಥೆಯ ಕಾರ್ಯಧ್ಯಕ್ಷ ಬಿ.ಎಲ್. ರಂಗಸ್ವಾಮಿ, ಆಡಳಿತಾಧಿಕಾರಿ ಡಾ.ರಾಕೇಶ್,ಎಸ್.ಪಿ, ಪಿಯು ಕಾಲೇಜಿನ ಪ್ರಾಂಶುಪಾಲ ವರದರಾಜ ಹಾಗೂ ವಿವಿಧ ವಿಭಾಗದ ಮುಖ್ಯೋ ಪಾಧ್ಯಾಯರುಗಳು ,ಎಲ್ಲಾ ದೈಹಿಕ  ಶಿಕ್ಷಣ ಶಿಕ್ಷಕರು ಶಿಕ್ಷಕ ವರ್ಗ,ಉಪ ನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿಗಳು ಡಿವೈನ್ ಪಾರ್ಕ್ ಸಂಸ್ಥೆಯ  ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗಿಯಾಗಿದ್ದರು.

 ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಪಿಯು  ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.


 ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದ ಘಟನೆಗಳನ್ನು ಅವರ ತತ್ವ ಆದರ್ಶಗಳನ್ನು ಲೀಲಾವತಿ ಉಪನ್ಯಾಸ ನೀಡಿ ಯುವ ಜನಾಂಗ ಪ್ರಜೆಗಳು ಸ್ವಾಮಿ ವಿವೇಕಾನಂದ ಅವರ ಹಾದಿಯಲ್ಲಿ  ಸಾಗುವಂತೆ ಕರೆ ನೀಡಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು