ವಿಜಯ ಸಂಘರ್ಷ
ಭದ್ರಾವತಿ: ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗು ಪಿ. ಎನ್. ಆರ್. ಸೊಸೈಟಿ, ಭಾವನಗರ, ಗುಜರಾತ್ ಇವರ ಸಂಯುಕ್ತ ಆಶ್ರಯದಲ್ಲಿ ಜ: 8 ರ ಭಾನುವಾರ ಶಿವಮೊಗ್ಗ ನಗರದ ಜಿಲ್ಲಾ ನಿವೃತ್ತ ನೌಕರ ಸಂಘದ ಆವರಣದಲ್ಲಿ ಮಂಡಿನೋವು ಪಟ್ಟಿ ಚಿಕಿತ್ಸೆ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ವಿಜೇತ ಡಾ: ವಿಜಯ ನಾಯಕ್ ಮಂಡಿನೋವು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ರಹಿತ ಪಟ್ಟಿ ಅಳವಡಿಸಿ ಕೊಳ್ಳಲು ಮಾಗ೯ದಶ೯ನ ನೀಡು ವರು,ನಂತರ ಸ್ಥಳದಲ್ಲಿ ವೈದಕೀಯ ತಂಡದಿಂದ ವಕ್೯ಶಾಪ್ ನಲ್ಲಿ ಪಟ್ಟಿ ತಯಾರಿಸಿ ಅಳವಡಿಸಲಾಗುವುದು.
ಮಂಡಿನೋವು ಅನುಭವಿಸುತ್ತಿ ರುವರು ಮತ್ತು ಶಿಬಿರದಲ್ಲಿ ಪಟ್ಟಿ ಅಳವಡಿಸಿ ಕೊಳ್ಳಬಯಸುವವರು ಆರ್.ಟಿ.ನಟರಾಜ್ ಗೌರವ ಕಾಯ೯ದಶಿ೯ಗಳು ಮೊಬೈಲ್ ನಂ : 9448143165 ಶ್ರೀ ಕಲಾ ಕೌಶಲ್ಯಾ ಭಿವೃದ್ಧಿ ಕೇಂದ್ರ, ಮೊದಲಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಆರ್. ಟಿ. ಒ. ಆಫೀಸ್ ರಸ್ತೆ, ಡಿ. ಸಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ಮುಂಗಡವಾಗಿ ಹೆಸರು ನೊಂದಾಯಿಸಿ ಮಾಹಿತಿ ಪಡೆಯಬಹುದು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795