ಅಂತಿಮ ಮತದಾರರ ಪಟ್ಟಿ ಪ್ರಕಟ: ಹೊಸ ಸೇರ್ಪಡೆ-ಕೈ ಬಿಟ್ಟವುಗಳ ವಿವರ

 ವಿಜಯ ಸಂಘರ್ಷ



ಭದ್ರಾವತಿ: ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ತಹಸೀಲ್ದಾರ್ ಆರ್. ಪ್ರದೀಪ್ ಪ್ರಕಟಿಸಿದರು.


    ತಹಸೀಲ್ದಾರ್ ಕಚೇರಿ ಸಭಾಂಗಣ ದಲ್ಲಿ  ಸಂಜೆ ನಡೆದ ಸಭೆಯಲ್ಲಿ ಮಾತ ನಾಡಿದ ಅವರು, ಹೊಸದಾಗಿ 6,191 ಮತದಾರರು ಸೇರ್ಪಡೆಗೊಂಡಿದ್ದು, ಉಳಿದಂತೆ 5,323 ಮತದಾರರನ್ನು ಕೈ ಬಿಡಲಾಗಿದೆ. 2,405 ತಿದ್ದುಪಡಿಯ ಲಿದ್ದು, ಅಂತಿಮವಾಗಿ 2,07,609 ಮತದಾರರಿದ್ದಾರೆ. ಈ ಪೈಕಿ 1,01,058 ಪುರುಷ ಹಾಗು 1,06,546 ಮಹಿಳಾ ಮತ್ತು 5 ತೃತೀಯ ಲಿಂಗ ಮತದಾರರಿದ್ದು, ಒಟ್ಟಾರೆ ಅಂತಿಮ ಮತಪಟ್ಟೆಯಲ್ಲಿ 2,885 ಮತದಾರರ ಸಂಖ್ಯೆ ಹೆಚ್ಚಳ ವಾಗಿದೆ ಎಂದರು.


    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1266 ಮಂದಿ ಮತದಾರರು ಮರಣ ಹೊಂದಿದ್ದು, 3,366 ಮತದಾರರು ಸ್ಥಳಾಂತರ, 161 ಮತದಾರರು ಪುನರಾವರ್ತನೆ ಹಾಗು 530 ಮತದಾ ರರು ವಲಸೆ ಗೊಂಡಿದ್ದು, ಈ ಹಿನ್ನೆಲೆ ಯಿಂದ  ಒಟ್ಟು 5323 ಮಂದಿ ಮತ ದಾರರನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.


     18 ರಿಂದ 19 ವಯಸ್ಸಿನ 911 ಯುವ ಮತದಾರರು ಹಾಗೂ 1776 ವಿಕಲಚೇತನ ಮತ್ತು 355 ಗಣ್ಯ ವ್ಯಕ್ತಿ ಮತದಾರರಿದ್ದು, 253 ಮತಕಟ್ಟೆ ಅಧಿಕಾರಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.


     ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಟಿ. ಚಂದ್ರೇ ಗೌಡ, ಡಿ.ಸಿ ಮಾಯಣ್ಣ, ಆರ್.  ಕರುಣಾಮೂರ್ತಿ, ಬಿ.ಟಿ ನಾಗರಾಜ್, ಸಿ.ಎಂ ಖಾದರ್, ಮೊಸರಹಳ್ಳಿ ಸುರೇಶ್,ಎನ್.ರಾಮಕೃಷ್ಣ ,ಮೆಡಿಕಲ್ ಆನಂದ್ ಮತ್ತಿತರರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು