ವಿಜಯ ಸಂಘರ್ಷ
ಭದ್ರಾವತಿ: ಕೆಎಸ್ ಆರ್ ಟಿಸಿ ಘಟಕ ವ್ಯವಸ್ಥಾಪಕರು ಯಾವುದೇ ಮನವಿ ನೀಡಿದರು ಸರಿಯಾಗಿ ಸ್ಪಂದಿಸದೆ, ಉಡಾಫೆ ಉತ್ತರ ನೀಡುವ ಜೊತೆಗೆ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಆರೋಪಿಸಿದರು.
ಬುಧವಾರ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ-ಭದ್ರಾವತಿ ಮಾರ್ಗ ಮಧ್ಯೆ ಕಡದಕಟ್ಟೆ ಸಮೀಪ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಬ್ಲೆಬೈಲ್ ರಸ್ತೆಯ ಮೂಲಕ ವಾಹನಗಳು ಸಂಚರಿಸುತ್ತಿದ್ದು, ಉಂಬ್ಲೆಬೈಲ್ ರಸ್ತೆಯಲ್ಲಿ ಅನೇಕ ಶಾಲಾ ಕಾಲೇಜುಗಳಿದ್ದು, ಇಲ್ಲಿನ ರಸ್ತೆಗಳಿಗೆ ಹಂಪ್ ಅಳವಡಿಸುವುದು, ಹಾಗೂ ದೂರದ ಊರುಗಳಿಂದ ಬರುವ ಪ್ರಯಾಣಿಕರ ಸ್ಥಳೀಯವಾಗಿ ನಿಲುಗಡೆಗೆ ಅವಕಾಶ ಕೋರಿ ಮನವಿ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಘಟಕದ ವ್ಯವಸ್ಥಾಪ ಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು. ಕೂಡಲೇ ಅವಕಾಶ ಕಲ್ಪಿಸದೆ ಇದ್ದಲ್ಲಿ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರ ಅಳವಡಿಸದೆ ಇರುವುದರಿಂದ ರಾತ್ರಿ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಹನ ಚಾಲಕರು ಅಡ್ಡ ದಿಡ್ಡಿ ನಿಲ್ಲಿಸಿ ಇತರರಿಗೆ ತೊಂದರೆ ನೀಡುತ್ತಿದ್ದಾರೆ ಈ ಎಲ್ಲ ಸಮಸ್ಯೆ ಕೂಡಲೇ ಪರಿಹರಿಸಡಿದ್ದಲ್ಲಿ ಜೆಡಿಯು ಪಕ್ಷ ಹಾಗೂ ಸಾರ್ವಜನಿಕರ ಸಹಕಾರದಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.