ವಿಐಎಸ್ಎಲ್ ಉಳಿವಿಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಲಿ: ಶಶಿಕುಮಾರ್

 ವಿಜಯ ಸಂಘರ್ಷ



ಭದ್ರಾವತಿ: ಶತಮಾನದ ಇತಿಹಾಸ ಹೊಂದಿರುವ ಪ್ರತಿಷ್ಟಿತಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ, ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಯಿಂದ ಮುಚ್ಚಲು ಮುಂದಾಗಿದ್ದು ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರಕಾರಕ್ಕೆ ಸೂಚಿಸಿ ಕಾರ್ಖಾನೆಯನ್ನು ಉಳಿಸಿಕೊಡು ವಂತೆ ಸಂಯುಕ್ತ ಜನತಾ ದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ, ಒತ್ತಾಯಿಸಿದರು.


ಶನಿವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಅವರು,ಮೈಸೂರು ಮಹಾರಾಜರ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರ ದೂರ ದೃಷ್ಟಿಯ ಫಲವಾಗಿ ಏಷ್ಯಾ ಖಂಡದಲ್ಲಿ ಅತ್ಯುತ್ತಮವಾದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು 1923ರಲ್ಲಿ ಸ್ಥಾಪಿಸಲಾಯಿತು. ಇಂದಿಗೆ ನೂರು ವರ್ಷ ತುಂಬಿ ಶತಮಾನೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷದಿಂದ ಕಾರ್ಖಾನೆಯನ್ನು ಮುಚ್ಚಲು ಆದೇಶ ಹೊರಡಿಸಿರು 

ವುದು ದುರಂತ. ಕಾರ್ಖಾನೆ ಮುಚ್ಚು ವುದರಿಂದ ಕಾರ್ಖಾನೆಯ ಸಾವಿರಾರು ಕಾರ್ಮಿಕರು, ಕುಟುಂಬಗಳು, ಅವಲಂಬಿತರು, ನಿವೃತ್ತ ಕಾರ್ಮಿಕರು ಮನೆ ಮಠ ಕಳೆದು ಕೊಂಡು ಅನಾಥ ರಾಗುತ್ತಾರೆಂದು ದೂರಿದರು.


ರಾಜ್ಯದಲ್ಲಿ ಪಕ್ಷ ಬೇಧ ಮರೆತು ಎಲ್ಲಾ ಸಂಸದರು ನಾಡು ನುಡಿ, ಕಾರ್ಖಾನೆ ಗಳಿಗೋಸ್ಕರ ಹೋರಾಟ ನಡೆಸದೆ ತಮ್ಮ ಸ್ವಂತ ಹಿತ ದೃಷ್ಟಿಯಿಂದ ಕಾಲ ಕಳೆಯುತ್ತಿರುವುದು ಕಾರ್ಖಾನೆಗಳ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಕ್ರಮ ತೆಗೆದು ಕೊಳ್ಳದೆ ಇರುವುದು ವಿಷಾಧನಿಯ. ನೆರೆಯ ತಮಿಳುನಾಡಿನಲ್ಲಿ ನಾಡು ನುಡಿ ಜಲ ನೆಲ ಭಾಷೆ ಯಾವುದೇ ರೀತಿಯ ದಕ್ಕೆಯಾದಲ್ಲಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಪಕ್ಷಗಳು ಒಂದಾಗಿ ಕೇಂದ್ರದ ಸರ್ಕಾರಗಳ ಮೇಲೆ ಒತ್ತಡ ಹಾಕಿ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತವೆ, ಆದರೆ ರಾಜ್ಯದಲ್ಲಿ ಭ್ರಷ್ಟ ರಾಜಕಾರಣಿಗಳು ಒಗ್ಗಟ್ಟನ್ನು ಪ್ರದರ್ಶನ ಮಾಡದೆ ನಮ್ಮ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿದ್ದು ದುರಂತದ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.


1996 ರಲ್ಲಿ ಪ್ರಧಾನಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡ, ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ರ ದೂರ ದೃಷ್ಟಿಯ ಫಲವಾಗಿ ಸುಮಾರು 27 ವರ್ಷಗಳ ಕಾಲ ಕಾರ್ಖಾನೆ ಉಳಿದಿರುತ್ತದೆ.

ಕೇಂದ್ರ ಸರ್ಕಾರ ಉತ್ತರ ಭಾರತದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗಳಿಗೆ ನಾಲ್ಕು ಸಾವಿರಕೋಟಿ ಬಂಡವಾಳ ಹೂಡಿಕೆ ಮಾಡಿ ಏಷ್ಯಖಂಡದಲ್ಲಿ ಹೆಸರು ವಾಸಿಯಾಗಿ ನೂರು ವರ್ಷಗಳಿಂದ ಕಾರ್ಯನಿರ್ವ ಹಿಸುತ್ತ ಬಂದಿರುವ ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿ

ಬೀದಿ ಪಾಲಾಗಲಿರುವ ಸಾವಿರಾರು ಕಾರ್ಮಿಕ ಕುಟುಂಬಗಳ ನೆರವಿಗೆ ದಾವಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಮೋಹನ್ ಕುಮಾರ್ಸಾಮಾಜಿಕ ಹೋರಾಟಗಾರ ರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು