ವಿಜಯ ಸಂಘರ್ಷ
ಭದ್ರಾವತಿ : ತಾಲೂಕಿನ ಅರಳ್ಳಿಹಳ್ಳಿ ಗ್ರಾಮದ ತಾಜ್ ಮಸ್ಜೀದ್ ಬೀದಿ ಯಲ್ಲಿ ನಿವಾಸಿಗಳ ನಡುವೆ ತಿಪ್ಪೆ ಗುಂಡಿಯ ವಿಚಾರದಲ್ಲಿ ಗಲಾಟೆ ಯಾಗಿದ್ದು ಈ ಗಲಾಟೆಯಲ್ಲಿ ಮಹಿಳೆ ಯೋರ್ವರು ಸಾವನ್ನಪ್ಪಿದ್ದಾರೆ.
ಅರಳಹಳ್ಳಿಯಲ್ಲಿ ಫಯಾಜ್ ಅಹ್ಮದ್ ಮತ್ತು ಫೆಮೀದಾ ಭಾನು ದಂಪತಿ ಗಳಿಗೆ ಊರಿನಲ್ಲಿ ಸ್ತಿರಾಸ್ಥಿಯಿಂದ ಬಂದ ಜಮೀನು ಇದ್ದು ತಮ್ಮ ಜಮೀನಿನಲ್ಲಿಯೇ ಮನೆ, ಹಸುವಿನ ಕೊಟ್ಟಿಗೆ ಕಟ್ಟಿಕೊಂಡು ಜೀವನ ನಡೆಸಿ ದ್ದಾರೆ. 45 ವರ್ಷದಿಂದ ಇಲ್ಲೇ ಬಾಳಿ ಬದುಕುತ್ತಿದ್ದ ದಂಪತಿಗಳಿಗೆ 15 ವರ್ಷ ದಿಂದ ಈಚೆಗೆ, ಹಿಂಬದಿಯ ಮನೆಯ ಅಹ್ಮದ್ ಅಶ್ರಫ್ ಕುಟುಂಬ ಮನೆಯ ಹಿಂಬದಿಯಲ್ಲಿದ್ದ ತಿಪ್ಪೆ ಗುಂಡಿಯ ವಿಚಾರದಲ್ಲಿ ತಕರಾರು ಇತ್ತು.
ಹಸುವಿನ ಮಲಮೂತ್ರಗಳು ತಮ್ಮ ಜಮೀನಿನಲ್ಲಿಯೇ ಇದ್ದ ತಿಪ್ಪೆಗುಂಡಿಗೆ ಹಾಕುತ್ತಿದ್ದ ಕಾರಣದಿಂದ ಅಶ್ರಫ್ ಈ ಗುಂಡಿಗೆ ಏನೂ ಹಾಕಬೇಡಿ ಸೊಳ್ಳೆ ಮೊದಲಾದ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತೆ ಎಂಬುದು ಅವರ ಅಕ್ಷೇಪವಾಗಿತ್ತು ಎಂದು ಅವರ ಸಹೋದರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೊನ್ನೆ ಇಬ್ಬರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯನ್ನ ಊರಿನ ಹಿರಿಯರು ನಾಳೆ ತೀರ್ಮಾನ ಮಾಡೋಣವೆಂದು ಸೂಚಿಸಿದ್ದರು.
ಆದರೆ ಮರುದಿನವೇ ಫಮೀದಾ ಭಾನು(55) ಜೊತೆ ಅಶ್ರಫ್ ಪತ್ನಿ ನೂರ್ ಸಲ್ಮಾ ಮತ್ತು ತಂಗಿ ಆಸ್ಮಾ ಮೂವರು ಸೇರಿ ಫೆಮೀದಾ ಭಾನು ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದನ್ನ ತಿಳಿದ ಸಹೋದರ ಆಸಿಫುಲ್ಲಾ ಮತ್ತು ಮಗಳು ಫೌಜಿಯಾ ಜಗಳ ಬಿಡಿಸಲು ಬಂದಿದ್ದಾರೆ. ಫೌಜಿಯಾಳನ್ನೂ ಥಳಿಸಿ, ನೂರು ಸಲ್ಮಾ ಕಿವಿಭಾಗದಲ್ಲಿ ಕಚ್ಚಿದ್ದಾರೆ ಎಂದು ಆಸಿಫುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಗಳದಲ್ಲಿ ಸುಸ್ತಾಗಿ ಚರಂಡಿಗೆ ಬಿದ್ದ ಫೆಮೀದಾ ಭಾನು ರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದರು ಅವರ ಸಾವನ್ನ ದೃಢಪಡಿಸಿದ್ದಾರೆ. ಉದ್ದೇಶ ಪೂರಕವಾಗಿ ಸಹೋದರಿಯ ಕೊಲೆ ಮಾಡಲಾಗಿದೆ ಎಂದು ಸಹೋದರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795