ವಿಜಯ ಸಂಘರ್ಷ
ಭದ್ರಾವತಿ : ನಗರದ ಸಂತೆ ಮೈದಾನ ದಲ್ಲಿ ಸುಮಾರು 60 ವರ್ಷಗಳಿಂದ ಹೃದಯ ಭಾಗದಲ್ಲಿ ನಡೆಯುತ್ತಿರುವ ಸಂತೆ ನಗರಸಭೆ ಆಡಳಿತ ಏಕಾಏಕಿ ಸ್ಥಳಾಂತರಮಾಡಲು ಮುಂದಾಗಿರು ವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಆಕ್ರೋಶ ವ್ಯಕ್ತ ಪಡಿಸಿದರು.
ಕಳೆದ ಡಿಸೆಂಬರ್ 10 ರಿಂದ ವಿಧಾನ ಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾ ಗಿರುವ ಚಿಟಿಕೆ ಉಪ್ಪು ಸಂಗ್ರಹಣೆ ಅಭಿಯಾನವು ಭಾನುವಾರ ಸಂತೆ ಮೈದಾನದಲ್ಲಿ ಸಭೆ ಸೇರಿ ಮಾತನಾಡಿದರು.
ಹಾಲಿ ಸಂತೆ ಮೈದಾನದಲ್ಲಿ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಹಲವಾರು ವರ್ತಕರು ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಸಂತೆ ಮೈದಾನದಲ್ಲಿ ಮೂಲ ಭೂತ ಸೌಲಭ್ಯ ಇಲ್ಲದಿದ್ದರೂ ಸಹ ಅನುಸರಣೆ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದಾರೆ.
ಈಗ ಏಕಾ ಏಕಿ ಕೃಷಿ ಉತ್ಪನ್ನ ಮಾರು ಕಟ್ಟೆಯ ಆವರಣಕ್ಕೆ ಸ್ಥಳಾಂತರ ಮಾಡಲು ಮುಂದಾಗಿರುವುದನ್ನು ಕೈ ಬಿಟ್ಟು ಇರುವ ಸ್ಥಳದಲ್ಲಿ ಮುಂದುವರಿಯಲಿ ಎಂದರು.
ಅಕಸ್ಮಾತ್ ಸ್ಥಳಾಂತರ ಮಾಡಲು ಮುಂದಾದಲ್ಲಿ ವ್ಯಾಪಾರಸ್ಥರೊಡ ಗೂಡಿ ನಗರಸಭೆ ಮುಂಭಾಗ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795