ಗುತ್ತಿಗೆ ಕಾರ್ಮಿಕರ ಹೋರಾ ಟಕ್ಕೆ ಕೆಆರ್ ಎಸ್ ಪಕ್ಷದ ಬೆಂಬಲ

 ವಿಜಯ ಸಂಘರ್ಷ



ಭದ್ರಾವತಿ: ನಗರದ ವಿಐಎಸ್ಎಲ್ ಕಾರ್ಖಾನೆ ಮುಚ್ಚಲು ಮುಂದಾಗಿ ರುವುದು ಖಂಡನೀಯ. ಇದರಿಂದ ಕಾರ್ಮಿಕರ ಜೀವನ ದುಸ್ಥರವಾಗ ಲಿದ್ದು, ಕೂಡಲೇ ಅಗತ್ಯ ಬಂಡವಾಳ ತೊಡಗಿಸಿ ಕಾರ್ಖಾನೆ ಉಳಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಗ್ರಹಿಸಿತು.


ಬುಧವಾರ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಹಮ್ಮಿಕೊಳ್ಳ ಲಾಗಿದ್ದ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿ, ಭದ್ರಾವತಿಯ ಕಣ್ಣಾಗಿರುವ ಕಾರ್ಖಾನೆ ಯನ್ನು ಮುಚ್ಚಿದರೆ ಭದ್ರಾವತಿಯ ಜನತೆಗೆ ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ, ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್ ತಿಳಿಸಿದರು.


ಈ ಸಂದರ್ಭದಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ್, ತಾಲ್ಲೂಕು ಅಧ್ಯಕ್ಷ ನಾಗರಾಜ್. ಕಾರ್ಯದರ್ಶಿ ಚಿನ್ನಯ್ಯ, ಶಬರೀಶ್ ಲಂಚ ಮುಕ್ತ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಭು. ಮುಖಂಡರಾದ ತೀರ್ಥೇಶ್ ರಾಜೇಂದ್ರ, ವಿನೋದ್, ಸುಮಿತ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು