ಮೆಸ್ಕಾಂ ಅಧಿಕಾರಿಗಳ ವಿರುದ್ದ ಹರಿಹಾಯ್ದ ಕಾಂಗ್ರೆಸ್ ಮುಖಂಡರು

 ವಿಜಯ ಸಂಘರ್ಷ



ಶಿಕಾರಿಪುರ: ನಾನಾ ಬೇಡಿಕೆ ಈಡೇರಿ ಸಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಮೆಸ್ಕಾಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 

ಮೆಸ್ಕಾಂ ಅಧಿಕಾರಿಗಳು ರೈತರ ಬಳಿ ಅಕ್ರಮವಾಗಿ ಹಣ ಸುಲಿಗೆ ಮಾಡು ತ್ತಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡದೇ ಮೆಸ್ಕಾಂ ಅಧಿಕಾರಿಗಳು ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದು ತಾಲೂಕಿನ ಕೆಲವು ಬಾಗಗಳಲ್ಲಿ ರಾತ್ರಿ ಕಾಡು ಪ್ರಾಣಿಗಳ ತೊಂದರೆ ಇದ್ದು, ರೈತರಿಗೆ ಕಷ್ಟ ಆಗುತ್ತಿದೆ, ಹಗಲಿನಲ್ಲಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲಿ, ಕೆಲವು ಮೆಸ್ಕಾಂ ಅಧಿಕಾರಿ ಗಳು ಅನೇಕ ಕಡೆ ಒಂದೇ ಆರ್ ಆರ್ ನಂಬರ್ ಗೆ ಹಣ ಪಡೆದುಕೊಂಡು ಶುಂಠಿ ಬೆಳೆಗಾರರಿಗೆ ಮತ್ತು ಹಲವರಿಗೆ ವಿದ್ಯುತ್ ಅಕ್ರಮವಾಗಿ ನೀಡಿದ್ದು ಇದು ಲೋಕಾಯುಕ್ತ ತನಿಖೆ ಆಗಬೇಕಿದೆ ಎಂದು ಅಗ್ರಹಿಸಿದರು.

ಸಮರ್ಪಕವಾಗಿ ವಿದ್ಯುತ್ ಸರಬರಾ ಜು ಇಲ್ಲದೇ ಟ್ರಾನ್ಸಪಾರ್ಮರ್ ಗಳು , ಸುಟ್ಟು ಹೋಗಿದ್ದು ಅದನ್ನು ತಕ್ಷಣ ಬದಲಾವಣೆ ಮಾಡಿಕೊಡಲು ಹಣ ನೀಡಬೇಡಿ ಎಂದು ಸಚಿವರು ಹೇಳಿಕೆ ನೀಡುತ್ತಾರೆ, ಆದರೆ ಮೆಸ್ಕಾಂ ಅಧಿಕಾರಿಗಳು ರೈತರ ಬಳಿ ಹಣ ಪಡೆಯದೇ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಭ್ರಷ್ಟಾಚಾರದಲ್ಲಿ ಶಾಸಕ ಹಾಗೂ ಸಂಸದರಿಗೂ ಪಾಲು ಇರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದರು, ಅಕ್ರಮ ಸಕ್ರಮ ಸೇರಿದಂತೆ ರೈತರ ಬೆಳೆಗಳಿಗೆ ಸೂಕ್ತ ದರ ನಿಗದಿಪಡಿಸ ಬೇಕಿದೆ, ನಮ್ಮ ಹೋರಾಟಕ್ಕೆ ಸರಕಾರ,ಅಧಿಕಾರಿಗಳು ಸ್ಪಂದಿಸ ದಿದ್ದರೆ, ರೈತರ ಬಳಿ ಇದೇ ರೀತಿ ಹಣ ವಸೂಲಿ ಮಾಡುತಿದ್ದರೆ ಉಗ್ರಹೋರಾ ಟದ ಎಚ್ಚರಿಕೆ  ನೀಡಿ ತನಿಖೆಗೆ ಆಗ್ರಹ ಪಡಿಸಿದರು.

ತಾಲೂಕು ಕಾಂಗ್ರೆಸ್ ಮುಖಂಡರಾದ ಗೋಣಿ ಮಾಲತೇಶ್ ಮಾತನಾಡಿ ಅವೈಜ್ಞಾನಿಕ,ಅಸಮರ್ಪಕ ವಿದ್ಯುತ್ ಸರಬರಾಜುವಿನ ಕಾರಣ ರೈತರ ಬೆಳೆಗಳು ಅತಿವೃಷ್ಟಿ ಅನಾವೃಷ್ಟಿಗಳಿಗೆ ತುತ್ತಾಗಿದ್ದು ಸರಕಾರದ ಬೇಜವಾಬ್ದಾರಿ ಅಧಿಕಾರಿಗಳಿಂದ ರೈತರಿಗೆ ತೊಂದರೆ ಆಗುತ್ತಿದೆ, ಈ ಹಿಂದೆ ಕಾಂಗ್ರೆಸ್ ಸರಕಾರ ರೈತರಿಗೆ ಅನೇಕ ಕೊಡುಗೆ ನೀಡಿತ್ತು ಆದರೆ ಬಿ ಜೆ ಪಿ ಸರಕಾರ ರೈತರ ಜಮೀನುಗಳಿಗೆ ಅಳವಡಿಸಿ ರುವ ವಿದ್ಯುತ್ ಪಂಪ್ ಸೆಟ್ ಗಳಿಗೂ ಶುಲ್ಕ ಬಿಲ್ ಕಟ್ಟಿಸಿ ಕ್ಕೊಳ್ಳುವುದು ಸೇರಿದಂತೆ ಹಲವು ಅವೈಜ್ಞಾನಿಕ ಯೋಜನೆ ರೂಪಿಸಲು ಹೊರಟಿರುವ ಭ್ರಷ್ಟ ಸರಕಾರ ಭ್ರಷ್ಟ ಅಧಿಕಾರಿ ಗಳಿಂದ ರೈತರಿಗೆ ತೊಂದರೆ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ  ಮೆಸ್ಕಾಂ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಾಂತ ವೀರಪ್ಪಗೌಡ್ರು, ಬಂಡಾರಿ ಮಾಲ ತೇಶ್, ನಾಗರಾಜ್ ಗೌಡ್ರು,ರಾಘವೇಂದ್ರ ನಾಯ್ಕ್,ಶಿವಕುಮಾರ್, ಗೋಣಿ ಪ್ರಕಾಶ್, ಉಳ್ಳಿದರ್ಶನ್, ಗೋಣಿ ಸಂದೀಪ್, ಹುಲ್ಮಾರ್ ಶಿವು, ಹುಲ್ಮಾರ್ ಕಮಲಮ್ಮ, ಗೋಣಿ ಶಕುಂತಲಮ್ಮ,ಜಯಶ್ರೀ, ಕಬೂತರ್, ಮುಜೀಬ್, ಆರ್.ಪಿ.ಮಂಜು ನಾಥ್,  ಮಲ್ಲಿಕ್ ನಾಯ್ಕ್ ಮತ್ತಿತರರಿದ್ದರು.

(ವರದಿ ಹುಲಿಗಿ ಕೃಷ್ಣ )

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು