ಮೊಬೈಲ್‌ ಬಳಕೆ ಪೂರಕ ವಾಗಬೇಕೇಹೊರತುಮಾರಕವಾಗಬಾರದು

 ವಿಜಯ ಸಂಘರ್ಷ



ಸಾಗರ: ಜಾನಪದ ಗಾಯನದ ಸೊಗಡಿನಿಂದ ಹಾಡುತ್ತಾ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು ಆಗ ಅವರಿಗೆ ಶ್ರಮದಾಯಕ ಎನಿಸುತ್ತಿರ ಲಿಲ್ಲ ಆನಂದದಿಂದ ಅಚ್ಚುಕಟ್ಟಾಗಿ ನಿರ್ವಹಿಸುವಂತಾಗುತ್ತಿತ್ತು ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮಿಗಳು ಹೇಳಿದರು.


ಅವರು ತಾಲ್ಲೂಕಿನ ಆನಂದಪುರ  ಸಮೀಪದ ಜಗದ್ಗುರು ಮುರುಘ ರಾಜೇಂದ್ರ ಸಂಸ್ಥಾನ ಮುರುಘಾ ಮಠದದಲ್ಲಿ ಕಣ್ವೇಶ್ವರ ಜಾನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕöತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಕಲಾ ಉತ್ಸವದ ಸಾನಿಧ್ಯವಹಿಸಿ ಮಾತನಾಡಿದರು.


ಟಿ.ವಿ.ಮೊಬೈಲ್‌ ಗಳ ಬಳಕೆ ಕಲೆಗಳಿ ಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಕಾಳೋಸು ಮುಗಿದಾವು ಪದಗಳು ಮುಗಿದಿಲ್ಲ ಎಂಬುದು ನಮ್ಮಲ್ಲಿ ಎಂಥ ಅಗಾಧ ವಾದ ಜಾನಪದ ಹಾಡುಗಳಿದ್ದವು ಎಂಬುದನ್ನು ಪ್ರತಿಪಾದಿಸುತ್ತದೆ. ಭಾರತದ ಬೇರೆ ಬೇರೆ ಜನಾಂಗದವರು ತಮ್ಮದೇ ಆದ ಜಾನಪದ ಕಲೆಗಳನ್ನು ರೂಪಿಸಿ ಬೆಳೆಸಿಕೊಂಡು ಬಂದಿರು ವುದು ವೈಶಿಷ್ಠವಾದದು. ಇಂದು ಕಲೆ ಉಳಿದಿದೆ ಎಂದರೆ ಅದು ಗುಡ್ಡಗಾಡು, ಬುಡಕಟ್ಟು ಜನಾಂಗದವರಲ್ಲಿ ಮಾತ್ರ ನಾಗರೀಕತೆಗೊಳಗಾದವರಲ್ಲಿ ಕಲೆ ಉಳಿಯದಿರುವುದು ದುರಂತ. ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಪೋಷಿಸಿದಾಗ ಮಾತ್ರ ಇಂತಹ ಕಲೆ ಗಳು ಮುಂದಿನ ಪೀಳಿಗೆಗೆ ವರ್ಗಾಯಿ ಸಲು ಸಾಧ್ಯ. ದೇಹ ಮತ್ತು ಮನಸ್ಸು ಉಲ್ಲಸಿತವಾಗಿರಲು ಕಲೆ ಪ್ರಧಾನವಾ ದುದು ಪ್ರತಿಯೊಬ್ಬರಲ್ಲೂ ಒಂದೊo ದು ಕಲೆ ಸುಪ್ತವಾಗಿರುತ್ತದೆ ಅದನ್ನು ಹತ್ತಿಕ್ಕದೆ ತನ್ನ ಪ್ರತಿಭೆಯನ್ನು ಅನಾವ ರಣಗೊಳಿಸಿಕೊಳ್ಳುವ ಕೆಲಸ ಮಾಡಿ ಕೊಳ್ಳಬೇಕು ಎಂದರು. ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಮೈಸೂರಿನ ಸೋಮನ ಕುಣಿತ, ನಂದಿಧ್ವಜ, ಕಡೂರಿನ ಸಂಬಾಳವಾದನ, ಸುಗ್ಗಿ ಕುಣಿತ, ಜೋಗುತಿ ನೃತ್ಯ , ಕೋಲಾಟ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಜಾನಪದ ಗಾಯನ ಮುಂತಾದ ಜಾನಪದ ಕಲಾ ಪ್ರಕಾರಗಳು ಪ್ರದ ರ್ಶನಗೊಂಡವು.


ಸಿಗoದೂರೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಕಾರ್ಯ ಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಟಾಕಪ್ಪ, ಬೂದ್ಯಪ್ಪ, ಕಣ್ವೇಶ್ವರ ಜಾನಪದ ಕಲಾ ಸಂಘದ ಅಧ್ಯಕ್ಷ ಟೀಕಪ್ಪ, ಕಾರ್ಯದರ್ಶಿ ರಾಜಶೇಖರ್, ಡಾ,ಕರುಣಾಕರ್, ಕೆ ಆರ್ ರಾಜು ಉಪಸ್ಥಿತರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು