ವಿಜಯ ಸಂಘರ್ಷ
ಭದ್ರಾವತಿ : ನಗರದ ಭೂತನಗುಡಿ ಸರ್ಕಾರಿ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಪರ್ವ ಅದ್ದೂರಿಯಿಂದ ಜರುಗಿತು.
ನಗರಸಭಾ ಸದಸ್ಯ ಟಿಪ್ಪುಸುಲ್ತಾನ್ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಜಬಿವುಲ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂ ದ್ರಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪಂಚಾಕ್ಷರಿ, ಶಿಕ್ಷಕರ ಸಂಘದ ಅಧ್ಯಕ್ಷ ಪ್ರಥ್ವಿರಾಜ್, ಜಿಲ್ಲಾ ಉಪಾಧ್ಯಕ್ಷ ಜಯಕುಮಾರ್,ಕಾರ್ಯದರ್ಶಿ ಮೋಹನ್, ಶ್ರೀಧರಗೌಡ, ಕಾಯ೯ ಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಹಿರೇಮಠ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ದೇವಮ್ಮ ಸ್ವಾಗತಿಸಿ,ಅನಿತಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಸುಜಾತ ನಿರೂಪಿಸಿದರು. ಉದ್ಯಮಿ ಬಿ.ಕೆ. ಜಗನ್ನಾಥ್, ದಾನಿಗಳಾದ ವೆಂಕಟೇಶ್, ವಾಗೀಶ್, ಲಕ್ಷ್ಮಿನಾರಾಯಣ, ಭಾರದ್ವಾಜ್ ವೇದಿಕೆಯಲ್ಲಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾಯಕ್ರಮ ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795