ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ದೂರು

 ವಿಜಯ ಸಂಘರ್ಷ



ಭದ್ರಾವತಿ: ತಾಲ್ಲೂಕಿನ ಎರೇಹಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಮಾಡದೆ ಕರ್ತವ್ಯ ಲೋಪ ವೇಸಗಿರುವುದು ಖಂಡಿಸಿ ಪಿಡಿಓ ರವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಪಕ್ಷದ ವತಿಯಿಂದ ಸಂಬಂಧಪಟ್ಟ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ದೂರು ನೀಡಿದರು ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿ ರುವುದಿಲ್ಲ ಎಂದು ಜೆಡಿಯು ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ಸೋಮವಾರ ತಾಲ್ಲೂಕು ಕಚೇರಿ ಯಲ್ಲಿ ಲೋಕಾಯುಕ್ತರಿಂದ ಹಮ್ಮಿ ಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ದೂರು ಸಲ್ಲಿಸಿ ನಂತರ ಮಾತನಾಡಿದರು.

ತಾಲೂಕಿನಲ್ಲಿ ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ, ಲೋಕೋಪ ಯೋಗಿ ಇಲಾಖೆ ಸಾರಿಗೆ ಇಲಾಖೆ ವಿಚಾರಕ್ಕೆ ಸಂಬಂಧಪಟ್ಟಂತೆ ಅನೇಕ ಮನವಿ ನೀಡಿದ್ದರು ಸಹ ಯಾವುದೇ ಪ್ರಯೋಜನವಾಗದೆ ಎಲ್ಲಾ ಇಲಾಖೆಗಳು ನಿರ್ಲಕ್ಷ ತೋರುತ್ತಿವೆ ಎಂದು ದೂರಿದರು.

ಸಂಬಂಧಪಟ್ಟ ಕರ್ತವ್ಯ ಲೋಪ ವೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ನಗರದ ಕಡದಕಟ್ಟೆ ಸಮೀಪದ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿ ರುವುದರಿಂದ ಭದ್ರಾವತಿಯಿಂದ ಶಿವಮೊಗ್ಗ ಸಂಚಾರಿಸುವ ವಾಹನಗಳು ಸರ್ಕಾರಿ ಬಸ್ಸುಗಳು ಮತ್ತು ವಾಹನಗಳು ಕೃಷ್ಣಪ್ಪ ಸರ್ಕಲ್ ಮತ್ತು ಅಂಡರ್ ಬ್ರಿಡ್ಜ್ ಮಾರ್ಗವಾಗಿ ಹೋಗಬೇಕಾಗಿರುವುದರಿಂದ ವಾಹನದ ಕಡೆ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗು ತ್ತಿದ್ದು ಸರ್ಕಾರಿ ಬಸ್ ಗಳ ವೇಗದ ಕಡಿಮೆ ಮಾಡಬೇಕೆಂದು ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ರಿಗೆ ಒಂದು ವರ್ಷದ ಹಿಂದೆ ಮನವಿ ಮಾಡಿದ್ದರು ಇಲ್ಲಿಯವರೆಗೂ ಯಾವು ದೇ ಪ್ರಯೋಜನವಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿರುವ ಶಶಿಕುಮಾರ್, ಈ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು, 

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಾದ ಅಶ್ವಥ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜನ್ನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗದೆ ಕರ್ತವ್ಯ ಲೋಪವೇಸಗಿರುವುದು ವಿಡಿಯೋ ಸಾಕ್ಷಿ ಸಹಿತ ಟಿಎಚ್ಒ ಮತ್ತು ಡಿಎಚ್ಒ ಅವರಿಗೆ ಸಲ್ಲಿಸಿದ್ದರು ತಮ್ಮದೆ ಇಲಾಖೆಯಾಗಿರುವುದರಿಂದ ಕ್ರಮ ಜರುಗಿಸದೆ ಮೀನಾ ಮೇಷ ವೆನಿಸುತ್ತಿದ್ದಾರೆ. 

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಡಿಎಚ್ಒ ಕಚೇರಿ ಆವರಣದಲ್ಲಿ ಜೆಡಿಯು ಮತ್ತು ವಿವಿಧ ಸಂಘಟನೆಗಳ ಜೊತೆಗೂಡಿ ಸಂಬಂಧ ಪಟ್ಟ ವೈದ್ಯರು ಮತ್ತು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತ್ತು ಮಾಡು ವಂತೆ ಧರಣಿ ಸತ್ಯಾಗ್ರಹ ನಡೆಸಿದ್ದರು ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ತಿಳಿದ್ದಾರೆ.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು