ವಿಜಯ ಸಂಘರ್ಷ
ಕೆ ಆರ್ ಪೇಟೆ: ತಾಲ್ಲೂಕಿನ ಸಂತೆಬಾಚ ಹಳ್ಳಿ ಹೋಬಳಿ ಬಿಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಗವಿರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಫೆ : 12ರ ಭಾನುವಾರ ರಾಜಾಹುಲಿ ದಿನೇಶ್ ಅಭಿಮಾನಿಗಳ ಬಳಗ ಘಟಕದ ವತಿಯಿಂದ ಸ್ವಾಭಿಮಾನಿ ಸಮಾವೇಶ ಹಮ್ಮಿ ಕೊಂಡಿದ್ದು ತಾಲೂಕಿನ ತಾ.ಪಂ. ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ರಾಜಾಹುಲಿ ದಿನೇಶ್ ಅಭಿ ಮಾನಿಗಳು ಹಿತೈಷಿಗಳು ಹಾಗೂ ಸ್ನೇಹಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಬ್ಯಾಲದ ಕೆರೆ ಹರೀಶ್ ಹಾಗೂ ಕೊರಟೀಕೆರೆ ಕೃಷ್ಣೇಗೌಡ ಮನವಿ ಮಾಡಿದರು.
ಅವರು ಪ್ರವಾಸಿ ಮಂದಿರದಲ್ಲಿ ರಾಜಾಹುಲಿ ದಿನೇಶ್ ಅಭಿಮಾನಿಗಳು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜಾಹುಲಿ ದಿನೇಶ್ ರಾಜಕೀಯಕ್ಕೆ ಬರುವ ಮುಂಚಿನಿಂದಲೂ ರೈತರಿಗೆ, ಬಡವರಿಗೆ ತಮ್ಮ ಕೈಲಾದ ಸಹಾಯ ವನ್ನು ಮಾಡುತ್ತಾ ಬಂದಿದ್ದಾರೆ. ತಾ.ಪಂ.ಸದಸ್ಯರಾಗಿ ಸಂತೆಬಾಚಹಳ್ಳಿ ಹೋಬಳಿಯಲ್ಲಿ ಸರ್ಕಾರದ ಅನುದಾ ನವನ್ನು ಕಾಯದೇ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಮಹಾಮಾರಿ ಕೊರೋನದ ಸಂಕಷ್ಟದ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಯರಿಗೆ,ನಿರ್ಗತಿಕರಿಗೆ, ಬಡವರಿಗೆ ಪುಡ್ ಕಿಟ್ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಎಡೆಬಿಡದೆ ಸುರಿದ ಬಿರುಗಾಳಿ ಮಳೆಗೆ ಸಾಕಷ್ಟು ಮನೆಗಳು, ಬೆಳೆಗಳು ಹಾನಿಯಾಗಿದ್ದವು. ಅಂತಹ ಮನೆಗಳ ವಾರಸುದಾರನ್ನು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವ ಮೂಲಕ ಸಹಾಯಹಸ್ತ ಚಾಚಿದ್ದರು.ಆದ್ದರಿಂದ ಅವರು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಸತ್ಯ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಾಜಾಹುಲಿ ದಿನೇಶ್ ಅವರನ್ನು ತಾಲೂಕಿನ ಎಲ್ಲಾ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ ಸಿ ಮಹದೇವ್, ಅಕ್ಕಿಹೆಬ್ಬಾಳು ರಾಜು, ಮನು ಶ್ಯಾರಹಳ್ಳಿ,ಬ್ಯಾಲದಕೆರೆ ಹರೀಶ್, ಪ್ರಸನ್ನ, ಕೃಷ್ಣೇಗೌಡ, ಬಳ್ಳೇಕೆರೆ ನಂದೀಶ್, ಭಾರತಿಪುರ ಸಂತೋಷ್, ಮಂಜು, ಸಿಂಗನಹಳ್ಳಿ ಪ್ರಕಾಶ್, ಕೊಮ್ಮೇನಹಳ್ಳಿ ಅನಿಲ್ ಚಿಕ್ಕೊಸಹಳ್ಳಿ ಸಂದೀಪ್,ರಾಕೇಶ್, ಕೊರಟೀಕೆರೆ ಹರೀಶ್ ಟೈಲರ್,ಮನು ಶ್ಯಾರಹಳ್ಳಿ,ಸಾಗರ ಗೊರವಿ, ಅಘಲಯ ಪ್ರತಾಪ್, ಆನಂದ್, ಸಂಜು,ರಂಜಿತ್, ನಾರಾಯಣಪುರ ಅಭಿಲಾಷ್,ಮನು ಸೇರಿದಂತೆ ಇತರರು ಹಾಜರಿದ್ದರು.
ವರದಿ *ಕಾಮನಹಳ್ಳಿ ಮಂಜುನಾಥ್*
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795