ವಿಜಯ ಸಂಘರ್ಷ
ಭದ್ರಾವತಿ: ನ್ಯೂಟೌನ್ ಸರಕಾರಿ ಸರ್ ಎಂವಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿಗೆ ನ್ಯಾಕ್ ಪೀರ್ ಕಮಿಟಿ 'ಎ' ಶ್ರೇಣಿ ನೀಡಿ ಗೌರವಿಸಿದೆ.
ಕಾಲೇಜು ಆಡಳಿತವು ನಿಕಟ ಪೂರ್ವ ಪ್ರಾಂಶುಪಾಲ ಡಾ:ಧನಂಜಯ ಅವರ ಕಾರ್ಯ ಸಾಧನೆಗೆ ಮತ್ತು ಸಹಕರಿಸಿದ ಪ್ರಾಧ್ಯಾಪಕ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದೆ. ಜ. 30 ಮತ್ತು 31 ರಂದು ದೆಹಲಿ, ಉತ್ತರ ಪ್ರದೇಶ ಹಾಗು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ ನ್ಯಾಕ್ ಪೀರ್ ಸಮಿತಿ ಯು ಕಾಲೇಜು ಅಭಿವೃದ್ಧಿಯ ಗುಣಮಟ್ಟ ಸಂಶೋಧನೆ, ಮೂಲ ಸೌಲಭ್ಯಗಳ ಪರಿಶೀಲನೆ, ಶೈಕ್ಷಣಿಕ ಗುಣಮಟ್ಟ ಆಡಳಿತ ವೈಖರಿ, ವಿದ್ಯಾರ್ಥಿಗಳ ಪೋಷಕರ ಅಭಿವೃದ್ಧಿ ಸಮಿತಿ ಸಿಡಿಸಿ ಅಭಿಪ್ರಾಯ ಸಂಗ್ರಹ ಮೌಲ್ಯ ಮಾಪನ ಮಾಡಿ ಕಾಲೇಜಿಗೆ ಸಿಜಿಪಿಎ 3.08 ಅಂಕಗಳನ್ನು 'ನೀಡಿ 'ಎ' ಶ್ರೇಣಿ ನೀಡಿದೆ. ಕಾಲೇಜಿನ ಹಿರಿಯ ಉಪನ್ಯಾಸಕರಾಗಿದ್ದ ಡಾ: ಧನಂಜಯ ಕಳೆದ 8 ತಿಂಗಳ ಹಿಂದೆ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕಾರ ಮಾಡಿ ಕಾಲೇಜು ಆಡಳಿತದಲ್ಲಿ ಸಂಚಲನ ಮೂಡಿಸಿದ್ದರು.
ಕಾಲೇಜು ಆವರಣದೊಳಗೆ ಹೊರಗಿನ ದುಷ್ಟ ಶಕ್ತಿಗಳು ಬರದಂತೆ ತಡೆ ಹಿಡಿದು ಉತ್ತಮ ಆಡಳಿತನಿರ್ವಹಣೆ, ವಿಶೇಷ ಕಾರ್ಯಕ್ರಮ ಗಳು, ಸಾಂಸ್ಕೃ ತಿಕ ಚಟುವಟಿಕೆಗಳು ಮಾಡಿ ವಿದ್ಯಾರ್ಥಿಗಳಲ್ಲಿ ಗುರು ಶಿಷ್ಯರ ಸಂಬಂಧಕ್ಕೆ ಅರ್ಥ ಕಲ್ಪಿಸಿದ್ದರು. ಡಾ: ಧನಂಜಯ್ ನ್ಯಾಕ್ ಸಮಿತಿಯ ಅಂತಿಮ ದಿನ ಚಿಕ್ಕಮಗಳೂರಿನ ಎನ್‌ಆರ್ ಪುರ ಪದವಿ ಕಾಲೇಜಿಗೆ ವರ್ಗಾವಣೆಗೊಂಡಿದ್ದರು.
ಮಂಗಳವಾರ ನ್ಯಾಕ್ ಸಮಿತಿಯ ಫಲಿತಾಂಶ ಹೊರಬಿದ್ದಿದೆ. ಕಾಲೇಜಿನ ಪ್ರಾಂಶುಪಾಲ ಡಾ: ನಾಸೀರ್ ಖಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಕೆ. ಸಂಗಮೇ ಶ್ವರ್ ಮತ್ತು ಸಿಡಿಸಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಡಾ: ಧನಂಜಯ ಮತ್ತು ಸಹಕರಿಸಿದ ಎಲ್ಲರನ್ನು ಅಭಿನಂದಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795