ವಿಜಯ ಸಂಘರ್ಷ
ಕೆ ಆರ್ ಪೇಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲೂಕು ಅಧ್ಯಕ್ಷರು ಹಾಗೂ ವಕೀಲರಾದ ವಿ.ಎಸ್.ಧನಂಜಯ್ ಕುಮಾರ್ ಅವರು ಅಪಾರ ಬೆಂಬಲಿ ಗರೊಂದಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆದ್ದೇನೆ ಎಂದು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ:14 ರ ಮಂಗಳವಾರ ಜೆಡಿಎಸ್ ಯುವ ಘಟಕದ ರಾಜ್ಯಾ ಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಜಯಮ್ಮ ಶಿವಲಿಂಗೇಗೌಡ ಸಮು ದಾಯ ಭವನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೂರಾರು ಬೆಂಬಲಿಗರು ಹಾಗೂ ಸ್ನೇಹಿತರು ಹಾಗೂ ಹಿತೈಷಿ ಗಳೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಚ್ ಟಿ ಮಂಜು ಅವರ ನಾಯಕತ್ವ ಒಪ್ಪಿ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಹಾಗೂ ಇನ್ನಿತರ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗು ತ್ತಿದ್ದೇನೆ ಎಂದು ತಿಳಿಸಿದರು.
ಅಂದು ನಡೆಯುವ ಸೇರ್ಪಡೆ ಕಾರ್ಯ ಕ್ರಮದಲ್ಲಿ ಸುಮಾರು ಆರೇಳು ಸಾವಿರ ಜನರು ಭಾಗವಹಿಸಿದ್ದಲಿದ್ದಾರೆ ಎಂದು ತಿಳಿಸಿದ ಅವರ ತಾಲ್ಲೂಕಿನ ಎಲ್ಲಾ ಸಮುದಾಯದ ಜನತೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕ್ಷೇತ್ರದ ಜೆಡಿಎಸ್ ಅಧೀಕೃತ ಅಭ್ಯರ್ಥಿ ಹೆಚ್ ಟಿ ಮಂಜು ಅವರಿಗೆ ಚುನಾ ವಣಾ ಆಯೋಗವು ಚುನಾವಣೆಯಲ್ಲಿ ಠೇವಣಿ ಹಣವನ್ನು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಿಖಿಲ್ ಕುಮಾರಸ್ವಾಮಿ ರವರಿಗೆ ಹಸ್ತಾಂತರಿಸಿ ಅಭ್ಯರ್ಥಿ ಹೆಚ್ ಟಿ ಮಂಜು ಅವರಿಗೆ ನೀಡಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾರ ತಾಲ್ಲೂಕು ಘಟಕದ ಅಧ್ಯಕ್ಷ ವಿ ಎಸ್ ಧನಂಜಯ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವೇಗೌಡ, ಎಲ್ ಐ ಸಿ ಶಿವಪ್ಪ, ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ, ಬೀರುವಳ್ಳಿ ಸೊಸೈಟಿ ಅಧ್ಯಕ್ಷ ಈರೇಗೌಡ, ಟೌನ್ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಅಂಬೇಡ್ಕರ್ ನಗರ ಗಣೇಶ್, ಪುರ ಸಭಾ ಮಾಜಿ ಸದಸ್ಯ ಹೊಸ ಹೊಳಲು ಗೋಪಾಲ್, ಈರಪ್ಪ,ಬಂಡಿಹೊಳೆ ಸೊಸೈಟಿ ಮಾಜಿ ಅಧ್ಯಕ್ಷ ಮಹದೇವೇ ಗೌಡ, ಅಲೋಕ್,ಲಿಂಗಾಪುರ ಶಿವಪ್ಪ,ನಂಜುಂಡಪ್ಪ,ಸ್ವಾಮಿಗೌಡ,ಮಾಕವಳ್ಳಿ ನಾಗೇಶ್, ಅಲ್ಲಮ ಪ್ರಭು,ರೆಬೆಲ್ ರವಿ,ಚಂದ್ರಪ್ಪ, ನಾಗಪ್ಪ,ರಾಜಣ್ಣ,ಲಕ್ಷ್ಮಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ *ಕಾಮನಹಳ್ಳಿ ಮಂಜುನಾಥ್*
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795