ವಿಜಯ ಸಂಘರ್ಷ
ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಅಧಿಕಾ ರಾವಧಿಯಲ್ಲಿ ಜೈಲಿಗೆ ಹೋಗಿದ್ದು ಅಂತಹ ವ್ಯಕ್ತಿಯ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಲು ಹೊರಟಿರುವ ಮುಖ್ಯಮಂತ್ರಿ ಹೇಳಿಕೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಧಾನ ಸಭಾ ಟಿಕೆಟ್ ಆಕಾಂಕ್ಷಿ ರಾಘವೇಂದ್ರ ನಾಯ್ಕ್ ತೀವ್ರವಾಗಿ ಖಂಡಿಸಿದ್ದಾರೆ.
ಶನಿವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾ ಘೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಯೇ ಪ್ರಪ್ರಥಮ ಬಾರಿಗೆ ಅಧಿಕಾರ ದಲ್ಲಿದ್ದಾಗಲೇ ಮುಖ್ಯಮಂತ್ರಿ ಓರ್ವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ.
ಈ ಒಂದು ಪ್ರಕರಣ ದೇಶದಲ್ಲಿಯೇ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿತ್ತು. ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದು ಜೈಲಿಗೆ ಹೋದಂತಹ ಏಕೈಕ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂ ರಪ್ಪ ನವರಾಗಿದ್ದಾರೆ.ಇವರು ಕರ್ನಾಟಕ ರಾಜ್ಯಕ್ಕೆ ಕಳಂಕ ತಂದಂತಹ ರಾಜಕಾರಣಿ ಕೂಡ ಆಗಿದ್ದಾರೆ.
ಇಂಥವರ ಹೆಸರನ್ನು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಮಾನ ನಿಲ್ದಾಣಕ್ಕೆ ಪದೆ ಪದೇ ಪ್ರಸ್ತಾಪ ಮಾಡಿದ್ದು ಬೇಸರ ತರುವ ವಿಚಾರ ವಾಗಿದೆ. ಜೈಲಿಗೆ ಹೋಗಿ ಬಂದಂತವರ ಹೆಸರನ್ನು ಇಡುವ ಬದಲು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಹೆಸರುಗಳನ್ನ ಇಡಿ, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳನ್ನು ಇಡಿ, ಶಿವಮೊಗ್ಗವನ್ನು ಕಟ್ಟಿದಂತಹ ಶಿವಪ್ಪ ನಾಯಕರ ಹೆಸರನ್ನಾದರೂ ಇಡಿ, ದೇಶಪ್ರೇಮಿಗಳ ಹೆಸರನ್ನು ಇಡಿ ಆದರೆ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರ ಹೆಸರನ್ನು ಏಕೆ ಇಡುವಿರಿ ಕೂಡಲೇ ಈ ಹೇಳಿಕೆಯನ್ನು ಹಿಂಪಡೆ ಯಬೇಕೆಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್, ಮುಖಂಡ ಕುಮಾರ್ ನಾಯ್ಕ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795