ಯಾವ ಕೊರತೆ ಇದೆಯೆಂದು ಕಾರ್ಖಾನೆ ಮುಚ್ಚಲು ಆದೇಶ ನೀಡಿದ್ದೀರಿ: ಪೃಥ್ವಿರೆಡ್ಡಿ

 ವಿಜಯ ಸಂಘರ್ಷ




ಭದ್ರಾವತಿ :ಸಮೃದ್ಧಿಯಾಗಿ ಎಲ್ಲಾ ಸೌಕರ್ಯಗಳಿರುವ ವಿಐಎಸ್ಎಲ್ ಕಾರ್ಖಾನೆ ಮುಚ್ಚಲು ಆದೇಶ ನೀಡಿರುವ ಉದ್ದೇಶವಾದರೂ ಏನು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.


ಅವರು ಶನಿವಾರ ವಿಐಎಸ್ಎಲ್ ಕಾರ್ಖಾನೆ ಮುಂಭಾಗ 24 ದಿನಗಳಿಂದ ಗುತ್ತಿಗೆ ಕಾರ್ಮಿಕರು ಹಮ್ಮಿ ಕೊಂಡಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಿ ಪಡಿಸಿ ಮಾತನಾಡಿದರು.


 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನ, ಆಡಳಿತ ನಡೆಸುತ್ತಿರುವ ಭ್ರಷ್ಟ ಅಧಿಕಾರಿಗಳಿಂದ ಇಂದು ಕಾರ್ಖಾನೆ ದುಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.


ಇಂದಿನ ಸರಕಾರಗಳು ಸರಕಾರಿ ಸೌಮ್ಯದ ಕಾರ್ಖಾನೆಗಳನ್ನು ನಷ್ಟದ ಅದಕ್ಕೆ ತಳ್ಳಿ ಆದಾನಿ, ಅಂಬಾನಿ ಅಂತಹ ಬಂಡವಾಳ ಶಾಹಿಗಳಿಗೆ ರೆಡ್ ಕಾರ್ಫೆಟ್ ಹಾಸಿ ಸ್ವಾಗತಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿಸಿದರು.


 ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ಮುಖಂಡರು, ಗುತ್ತಿಗೆ ಕಾರ್ಮಿಕರು, ನೂರಾರು ಕಾರ್ಮಿಕರು ಭಾಗವಹಿಸಿದ್ದರು.



ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು