ವಿಮಾನ ನಿಲ್ದಾಣಕ್ಕೆ ಯಡಿ ಯೂರಪ್ಪ ಹೆಸರೇ ಸೂಕ್ತ : ಮಂಜುನಾಥ್ ಸಿಂಗ್

 ವಿಜಯ ಸಂಘರ್ಷ



ಶಿಕಾರಿಪುರ : ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲು ಯಡಿಯೂ ರಪ್ಪರವರ ಶ್ರಮ ಹಾಗೂ ಆಸಕ್ತಿ ಯಿಂದಾಗಿ ಇಂದು ಜಿಲ್ಲೆಯ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಶಿಕಾರಿಪುರದ ಬಿ ಜೆ ಪಿ ಮುಖಂಡ ಮಂಜುನಾಥ್ ಸಿಂಗ್ ಹೇಳಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿ, ಯಡಿಯೂರಪ್ಪರವರು  ಮುಖ್ಯ ಮಂತ್ರಿಯಾಗಿ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ತಂದುಕೊಟ್ಟಂತಹ ಮಹನೀಯರು, ಜಿಲ್ಲೆ ಅಭಿವೃದ್ಧಿಯಾಗಲು ಮೂಲ ಕಾರಣ ಯಡಿಯೂರಪ್ಪನವರು, ನೀರಾವರಿ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಶಾಯಿ ಗಾರ್ಮೆಂಟ್ಸ್ ಮತ್ತು ಅನೇಕ ಕಾರ್ಖಾನೆಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿ ಮಾಡುವಲ್ಲಿಯಶಸ್ವಿ ಕಂಡವರು.


ಬಿಎಸ್ ವೈ ಮುಖ್ಯಮಂತ್ರಿ ಆಗಿದ್ದ ಸಮಯ ದಲ್ಲಿ ಸಾವಿರಾರು ಕೋಟಿ ಅನುದಾನ ನೀಡಿ ಜಿಲ್ಲೆಯನ್ನ ಅಭಿ ವೃದ್ಧಿಪಡಿಸಿದ್ದಾರೆ ಇವರ ಶ್ರಮದಿಂ ದಾಗಿ ಶಿವಮೊಗ್ಗ ನಗರಸಭೆ ಸ್ಮಾರ್ಟ್ ಸಿಟಿ ಆಗಿದೆ  ಶಿಕಾರಿಪುರದಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಗಳು ರಸ್ತೆಗಳು ಕಟ್ಟಡ ಗಳು ಸುಸಜ್ಜಿತ ಆಡಳಿತ ಕಚೇರಿಗಳು ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೂಡ ಅಭಿವೃದ್ಧಿಯಾಗಿದೆ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾ

ಣವಾಗಿದೆ ಯಡಿಯೂರಪ್ಪನವರ ಮುಂದಾಲೋಚನೆ ಯು ಇಂದು ವಿಮಾನ ನಿಲ್ದಾಣ ನಿರ್ಮಾಣ ವಾಗಿದೆ. ಇದರಿಂದ ಬಂಡವಾಳ ಹೂಡುವ ಉದ್ಯಮಿಗಳು ಹೆಚ್ಚಾಗುವ ನಿರೀಕ್ಷೆ ಇದೆ ಹಾಗೂ ಶಿವಮೊಗ್ಗದಿಂದ ಎಲ್ಲಾ ಜಿಲ್ಲೆ ದೇಶ ವಿದೇಶ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ಯಾಗಿದೆ ಇದು ಯಡಿಯೂರಪ್ಪ ನವರ ಕೊಡುಗೆ ಯಾಗಿದೆ ಇವರ ಅವಧಿ ಯಲ್ಲಿ ಕೃಷಿ ಕ್ಷೇತ್ರ ಸಾಂಸ್ಕೃತಿಕ ಕ್ಷೇತ್ರ ಶೈಕ್ಷಣಿಕ ಕ್ಷೇತ್ರ ಶ್ರೀಮಂತ ವಾಗಿದ್ದು, ದೇಶವೇ ತಿರುಗಿ ನೋಡು ವಂತಾಗಿದೆ ರಾಜ್ಯ ಸರ್ಕಾರಗ ಳಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಏಕೈಕ ರಾಜಕಾರಣಿ ಯಡಿಯೂರಪ್ಪ ಮಾತ್ರ ಇವರ ಹೆಸರನ್ನು ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣಕ್ಕೆ ಈಗಾಗಲೇ ಇದ್ದು, ರಾಜ್ಯದ ಪ್ರತಿ ಮನೆ ಮನೆಗ ಳಲ್ಲೂ ಯಡಿಯೂರಪ್ಪನವರ ರೈತಪರ ಹೋರಾಟ ಅವರ ಕೊಡುಗೆಗಳು ಕೇವಲ ಶಿವ ಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯವೇ ಕೊಂಡಾಡುತ್ತಿದೆ. ಇಂತಹ ಧೀಮಂತ ನಾಯಕರ ಹೆಸರು ವಿಮಾನ ನಿಲ್ದಾಣ ಕ್ಕೆ ಸೂಕ್ತವಾಗಿದ್ದು ಯಡಿಯೂರಪ್ಪ ನವರ ಹೆಸರನ್ನು ಪಕ್ಷಭೇದ ಮರೆತು ಅವರ ಸಾಧನೆಗೆ ಈ ಜಿಲ್ಲೆಗೆ ನೀಡಿದ ಕೊಡುಗೆ ಯನ್ನು ಸ್ಮರಿಸಿ ಎಲ್ಲಾ ಸಂಘ ಸಂಸ್ಥೆಯವರು ಎಲ್ಲಾ ಪಕ್ಷದ ರಾಜ ಕಾರಣಿಗಳು ಒಕ್ಕೂರಲ್ಲಿ ನಿಂದ ಬೆಂಬಲಿಸಬೇಕೆಂದು ತಿಳಿಸಿದರು.ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷೆ ರೇಖಾಬಾಯಿ ಸೇರಿದಂತೆ ಹಲವರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು