ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರೇ ಫೈನಲ್: ಬಿ.ಎಸ್.ಯಡಿಯೂರಪ್ಪ

 ವಿಜಯ ಸಂಘರ್ಷ



ಶಿವಮೊಗ್ಗ : ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸ ರನ್ನೇ ಇಡಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ ನಡೆಯಲಿರುವ ಅಧಿವೇಶನದಲ್ಲಿ ಕುವೆಂಪು ಅವರ ಹೆಸರು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ.


ಈ ಹಿಂದೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿ ಯೂರಪ್ಪನವರ ಹೆಸರು ಇಡಬೇಕೆಂ ದು ನಿರ್ಧರಿಸಿತ್ತು. ಆದರೆ ಇದನ್ನು ಬಿ.ಎಸ್.ಯಡಿ ಯೂರಪ್ಪ ನಿರಾಕ ರಿಸಿದ್ದರು. ಇದೀಗ ಮತ್ತೆ ತಮ್ಮ ಹೆಸರು ಬೇಡವೆಂದು ಹೇಳಿರುವ ಅವರು, ಅಧಿವೇಶನದಲ್ಲಿ ನಿರ್ಣಯಕೈ ಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗು ವುದು ಎಂದು ಹೇಳಿದ್ದಾರೆ.


 ಫೆ.8ರಂದು ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಬೊಮ್ಮಾಯಿ ಬಿಎಸ್‍ವೈ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡುವುದಾಗಿ ಪುನರುಚ್ಛರಿಸಿದ್ದರು. ಇದಕ್ಕೆ ಮತ್ತೆ ಯಡಿಯೂರಪ್ಪನವರು ನಿರಾಕರಿಸಿದ್ದು, ಹಲವು ಊಹಾ ಪೋಹಗಳಿಗೆ ತೆರೆಯೆಳೆದಿದ್ದಾರೆ.


 ಕಳೆದ ಹಲವು ದಿನಗಳಿಂದ ಶಿವಮೊಗ್ಗ ಏರ್ಪೋರ್ಟ್ ಹೆಸರು ಚರ್ಚೆಗೆ ಒಳಗಾಗಿತ್ತು. ನಾಮಕರಣ ವಿಚಾರ ರಾಜಕೀಯ ಬಣ್ಣಕ್ಕೂ ತಿರುಗಿತ್ತು. ಈ ಹಿಂದೆ ಹಲವು ಹೆಸರುಗಳು ಕೇಳಿ ಬಂದಿದ್ದವು. ಆದರೆ ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪನವರ ಹೆಸರು ಮುಂಚೂಣಿಯಲ್ಲಿದ್ದವು.


ಇದೇ ತಿಂಗಳ 27ರಂದು ಪ್ರಧಾನಿ ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡಲಿದ್ದಾರೆ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಬಿಎಸ್‍ವೈ ಅಂತಿಮ ಮಾಡಿದ್ದಾರೆ. ನನ್ನ ಹೆಸರು ಇಡುವುದು ಬೇಡವೆಂದು ಮೊದಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದ ಬಿಎಸ್‍ವೈ, ಪ್ರಧಾನಿ ಮೋದಿಯವ ರಿಂದಲೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿಸಲಾಗುವುದು ಎಂದು ಹೇಳಿದ್ದಾರೆ.


ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು