ವಿಜಯ ಸಂಘರ್ಷ
ಭದ್ರಾವತಿ: ತಾಲೂಕು ಅರಳಿಹಳ್ಳಿ ಗ್ರಾಮದ ನಿವಾಸಿಗಳು ಚುನಾವಣಾ ಬಹಿಷ್ಕಾರ ಮುಂದಾಗಿದ್ದಾರೆ.
ಪ್ರತಿ ವಿಧಾನ ಸಭಾ ಹಾಗೂ ಸಂಸತ್ ಚುನಾವಣೆಗಳಲ್ಲಿ ಆಗಮಿಸುವ ಎಲ್ಲಾ ಪಕ್ಷಗಳ ರಾಜಕೀಯ ವ್ಯಕ್ತಿಗಳು ಸುಳ್ಳು ಆಶ್ವಾಸನೆ ನೀಡಿ ಹಕ್ಕು ಪತ್ರವನ್ನು ನೀಡುತ್ತೇವೆ. ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡುತ್ತಾರೆ.
ಕೇವಲ ಸುಳ್ಳು ಭರವಸೆ ನೀಡಿ ಹೋಗುವ ಯಾರೊಬ್ಬ ರಾಜಕಾರ ಣಿಗಳು ಗ್ರಾಮ ಪ್ರವೇಶಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.
ಚುನಾವಣೆ ಮುಗಿದ ನಂತರ ಯಾರೊಬ್ಬ ಚುನಾಯಿತರು ಅಥವಾ ಸೋತವರು ಗ್ರಾಮಗಳಿಗೆ ಆಗಮಿಸದೆ ಸಮಸ್ಯೆ ಕೇಳದಿರುವ ಕಾರಣದಿಂದ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಅಲ್ಲದೆ ಯಾವುದೇ ರಾಜಕೀಯ ವ್ಯಕ್ತಿಗಳು ಗ್ರಾಮದ ಒಳಗೆ ಪ್ರವೇಶ ವಿಲ್ಲವೆಂದು ತೀರ್ಮಾನ ಮಾಡಿ ಕೊಂಡಿದ್ದಾರೆ. ರಾಜಕೀಯ ವ್ಯಕ್ತಿಗಳು ಬಂದು ಹಣ ಸೀರೆ, ಹೆಂಡಕ್ಕೆ ಮಾರು ಹೋಗದಂತೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795