ವಿಜಯ ಸಂಘರ್ಷ
ರಾಜ್ಯದ ಪ್ರತಿಷ್ಠೆಯಾಗಿ ರುವ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಯನ್ನು ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಶುಕ್ರ ವಾರ ವಿವಿಧ ಕಾರ್ಮಿಕ ಸಂಘಟನೆ ಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ರಸ್ತೆಗೆ ಇಳಿದಿದ್ದು, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯ ಬೇಕೆಂದು ಆಗ್ರಹಿಸಿ ಬಂದ್ ಕರೆ ನೀಡಿವೆ. ಯಾವುದೇ ಕಾರಣಕ್ಕೂ ವಿಐಎಸ್‌ಎಲ್ ಮುಚ್ಚಬಾರದು, ವಿಐಎಸ್‌ಎಲ್ ಪುನಶ್ಚೇತನ ಮಾಡ ಬೇಕು ಎಂದು ಸಂಘಟನೆಗಳು ತಹ ಶೀಲ್ದಾರ್ ರವರಿಗೆ ಮನವಿ ಮಾಡಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗಿತ್ತು. ವಿಐಎಸ್‌ಎಲ್ ಕಾರ್ಮಿಕರು, ವಿವಿಧ ಸಂಘಟನೆಗಳ ಪ್ರಮುಖರು ಬೈಕ್ ಗಳಲ್ಲಿ ವಿವಿಧ ಬಡಾವಣೆಗೆ ತೆರಳಿ ಬಂದ್ ಗೆ ಸಹಕರಿಸುವಂತೆ ಸಾರ್ವ ಜನಿಕರಲ್ಲಿ ಮನವಿ ಮಾಡಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಪ್ರಾರಂಭವಾಗಿದ್ದು. ಈ ವೇಳೆ ಕಾರ್ಮಿ ಕರು ನಡು ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬಂದ್ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ವರ್ತಕರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಸಮುದಾಯ ದ ಮುಖಂಡರು ಸೇರಿ 26ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795