ಪ್ರತಿಯೊಬ್ಬರೂ ಭದ್ರಾವತಿ ಬಂದ್ ಗೆ ಬೆಂಬಲಿಸಿ ಸಹಕರಿಸಿ : ಬಿ.ಎನ್.ರಾಜು

 ವಿಜಯ ಸಂಘರ್ಷ



ಭದ್ರಾವತಿ: ವಿಐಎಸ್‌ಎಲ್ ಪುನಶ್ಚೇತ ನಕ್ಕೆ ಆಗ್ರಹಿಸಿ ವಿವಿಧ ಸಂಘಟನೆ ಗಳು, ನಾಗರಿಕರ ಬೆಂಬಲದೊಂದಿಗೆ ಸ್ವಯಂ ಪ್ರೇರಿತ ಬಂದ್ ಮಾಡಲು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ನಿರ್ಧರಿಸಿದ್ದಾರೆ.


ಈ ಹಿನ್ನೆಲೆ ಫೆ.24 ರ ನಾಳೆ ಭದ್ರಾವತಿ ಬಂದ್ ಗೆ ಕರೆ ನೀಡಲಾಗಿದೆ.ಹಲವಾರು ಸಂಘಟ ನೆಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿ ಧಿಗಳು ಭದ್ರಾವತಿ ಬಂದ್‌ಗೆ ಬೆಂಬಲ ನೀಡಿ ದ್ದಾರೆ. ಭದ್ರಾವತಿಯ ನಿವಾಸಿಗಳು ಕಾರ್ಖಾ ನೆ ಮುಚ್ಚುವ ನಿರ್ಧಾರವನ್ನು ವಿರೋಧಿಸಿ ಬಂದ್ ಆಚರಿಸಲು ಮುಂದಾಗಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ. ಎನ್. ರಾಜು ಮನವಿ ಮಾಡಿದ್ದಾರೆ.


ಫೆ :27 ರಂದು ಪ್ರಧಾನಿ ಮೋದಿ ವಿಮಾನ ನಿಲ್ದಾಣ ಲೋಕಾರ್ಪ ಣೆಗೊಳಿಸಲು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ ಗಮನ ಸೆಳೆಯುವ ಉದ್ದೇಶದಿಂದ ಫೆ.24 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಭದ್ರಾವತಿ ನಗರದಲ್ಲಿ ಬಂದ್ ಮಾಡಲು ತೀರ್ಮಾನಿಸ ಲಾಗಿದೆ. ಬೆಳಗ್ಗೆ 9 ಗಂಟೆಗೆ ವಿಐ ಎಸ್‌ಎಲ್ ಕಾರ್ಖಾನೆ ಮುಂಭಾಗ ದಿಂದ ಡಾ. ಅಂಬೇಡ್ಕರ್ ವೃತ್ತ, ಬಿ.ಹೆಚ್.ರಸ್ತೆ, ಚನ್ನಗಿರಿ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಲಾ ಗುತ್ತದೆ ಎಂದರು.


ಅಂಗಡಿ ವರ್ತಕರು, ವ್ಯಾಪಾರಸ್ಥರು, ಗ್ರಾಹಕರು, ಸಾರ್ವಜನಿಕರು ಸಹಕ ರಿಸಲು ಕೊರಿದ್ದಾರೆ.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು