ವಿಜಯ ಸಂಘರ್ಷ
ಭದ್ರಾವತಿ : ಶಿವಮೊಗ್ಗದ ವಾಸವಿ ಪಬ್ಲಿಕ್ ಸ್ಕೂಲ್, ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕ್ರತಿಕ ಕ್ರೀಡಾ ಟ್ರಸ್ಟ್ ವತಿಯಿಂದ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಮಾರ್ನಮಿ ಬೈಲಿನಲ್ಲಿ ಐದನೇ ವರ್ಷದ ಯೋಗ ಸ್ಪರ್ಧೆ ಹಾಗೂ 4 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೆ ಸಂದರ್ಭದಲ್ಲಿ ಪೇಪರ್ ಟೌನ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಹಾಗೂ ಜ್ಯುನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದ ಅಪೇಕ್ಷಾ ಮಂಜುನಾಥ್ ರವರ ಕಲಾ ಸೇವೆಯನ್ನು ಗುರುತಿಸಿ "ಕಲಾ ಸಾಮ್ರಾಟ್ ರಾಜ್ಯ ಪ್ರಶಸ್ತಿ" ಯನ್ನು ನೀಡಿ ಗೌರವಿಸಿದರು.
ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ರವರ ಸಮಾಜ ಮುಖಿ ಸೇವೆಯನ್ನು ಗುರುತಿಸಿ ಹೆಮ್ಮೆಯ ಕನ್ನಡತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.
ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀ ಯ ಸೇವೆ ಸಲ್ಲಿಸಿದ ಹಲವಾರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಟ್ರಸ್ಟ್ ಪದಾಧಿಕಾರಿಗಳು, ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ನಂತರ ಜ್ಯುನಿಯರ್ ವಿಷ್ಣುವರ್ಧನ್ (ಅಪೇಕ್ಷಾ ಮಂಜುನಾಥ್ ) ಇವರಿಂದ ಡಾ.ವಿಷ್ಣುವರ್ಧನ್ ರವರ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಪ್ರೇಕ್ಷಕರ ಮನಸೂರೆ ಗೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795