ಭದ್ರಾವತಿ ಶಾಸಕರ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ: ಹುಲ್ಮಾರ್ ಮಹೇಶ್

 ವಿಜಯ ಸಂಘರ್ಷ



ಶಿಕಾರಿಪುರ: ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಉಳಿವಿಗಾಗಿಕಾರ್ಮಿ ಕರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ ಬೆಂಬಲಿಸಿ ವಿಮಾನ ನಿಲ್ದಾಣ ಉದ್ಘಾ ಟನೆಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಾರ್ಖಾನೆ ಉಳಿಸಿ ಬಂಡವಾಳ ತೊಡಗಿಸಲು ಮನವಿ ನೀಡಲು ಹೊರಟಿದ್ದ ಕಾರ್ಮಿ ಕರು ಹಾಗೂ ಸ್ಥಳೀಯ ಶಾಸಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನೂರು ವರ್ಷ ಇತಿಹಾಸವುಳ್ಳ, ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯ ರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ನಿರ್ಮಾಣದ ಏಷ್ಯಾ ಖಂಡದಲ್ಲಿಯೇ ಹೆಸರು ಮಾಡಿದ್ದ ಕಾರ್ಖಾನೆ ಇಂದು ಮುಚ್ಚುವ ಆದೇಶದಿಂದ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಖ್ಯಧ್ವಾ ರದ ಮುಂಭಾಗ ಪ್ರತಿಭಟನೆ ನಡೆಸುತ್ತಿ ದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿರವರಿಗೆ ಮನವಿ ಸಲ್ಲಿಸಲು ಹೊರಡುವ ಮುನ್ನವೇ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ರವರ ಕುಮ್ಮಕ್ಕಿನಿಂದ ಪೋಲಿಸ್ ಇಲಾಖೆ ಯ ಮುಖಾಂತರ ಬಂಧನ ಮಾಡಿಸಿ ಮನವಿ ನೀಡಲು ಅವಕಾಶ ಕೊಡದೆ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕಿಡಿಕಾರಿದರು.


ಕಾರ್ಖಾನೆಗೆ ಕೇಂದ್ರ ಸರ್ಕಾರ ಬಂಡ ವಾಳ ತೊಡಗಿಸಿ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ಬದಲು ಕಾರ್ಖಾ ನೆಯನ್ನು ಮುಚ್ಚಿ ಆದಾನಿ ಅಂಬಾನಿ ರವರಿಗೆ ಮಾರಲುಹೊಂಚುಹಾಕು ತ್ತಿದೆ. ಸರ್.ಎಂ.ವಿಶ್ವೇಶ್ವರಾಯ ನವರು ಕಾರ್ಖಾನೆಯನ್ನು ನಿರ್ಮಿಸಿದ್ದಾಗ ಸುಮಾರು 20 ಸಾವಿರ ಕಾರ್ಮಿಕರು ಕಾರ್ಖಾನೆಯಲ್ಲಿ ಉದ್ಯೋಗ ಹೊಂದಿ ದ್ದರು. ಈಗಾಗಲೇ ಎಂಪಿಎಂ ಕಾರ್ಖಾ ನೆಯನ್ನು ರಾಜ್ಯ ಸರ್ಕಾರ ಬೀಗ ಜಡಿ ದಿದ್ದು ಕಾರ್ಮಿಕರು ವಲಸೆ ಹೋಗಿ ದ್ದಾರೆ. ಕಾರ್ಮಿಕರ ವಸತಿಗಳು ಪಾಳು ಬಿದ್ದಿದ್ದು ತಾಲೂಕಿನ ಜೀವನಾಡಿ ವಿಐಎಸ್ಎಲ್ ಕಾರ್ಖಾನೆ ಯನ್ನು ಕೂಡ ಮುಚ್ಚಿ ಕಾರ್ಮಿಕರನ್ನು ಬೀದಿ ಪಾಲು ಮಾಡುವ ಹುನ್ನಾರ ನಡೆ ಯುತ್ತಿದೆ ಎಂದರು.


ಸ್ಥಳಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ ರವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಭೇಟಿ ಮಾಡಿ ಕಾರ್ಖಾನೆ ಉಳಿಸಲು ಮಾತ ನಾಡಲು ಅವಕಾಶ ಕೊಡದ ಬಿಜೆಪಿ ಯ ಸಂಸದ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಕುಮ್ಮಕ್ಕಿನಿಂದ ಹೋರಾಟ ಗಳನ್ನು ಹತ್ತಿಕ್ಕಲಾಗುತ್ತಿದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾದ ಸಂಗಮೇಶ್ವರ ರವರ ಮೇಲೆ ಪೊಲೀ ಸ್ ಬಲ ಪ್ರಯೋಗಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ.


ಜಿಲ್ಲೆಯ ಹಲವು ಕ್ಷೇತ್ರಗಳ ಬಗ್ಗೆ ಉಲ್ಲೇಖಿಸಿ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪನವರೇ ಪಕ್ಕದಲ್ಲಿಯೇ ಇದ್ದ 18 ಕಿಲೋಮೀಟರ್ ವ್ಯಾಪ್ತಿಯ ಐತಿಹಾ ಸಿಕ ಕಾರ್ಖಾನೆಯ ಬಗ್ಗೆ ಒಂದು ಮಾತನಾಡದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಭದ್ರಾವತಿಯಲ್ಲಿ ಕಾಂಗ್ರೆಸ್ ಎಂಎಲ್ ಎ ಅಧಿಕಾರದಲ್ಲಿ ಇರುವುದರಿಂದ ಮತ್ತು ಇಲ್ಲಿ ಬಿಜೆಪಿಗೆ ನೆಲೆ ಇಲ್ಲದ ಕಾರಣ ರಾಜಕೀಯ ದ್ವೇಷದಿಂದ ಭದ್ರಾವತಿಯ ವಿಧಾನಸಭೆಯ ಕ್ಷೇತ್ರವನ್ನೇ ಮುಗಿಸಲು ಹೊರಟಿರುವ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಕಿಡಿಕಾರಿದ್ದಾರೆ.


ಭದ್ರಾವತಿಯ ಕಾರ್ಖಾನೆ ಉಳಿವಿ ಗಾಗಿ ಹೋರಾಟ ನಡೆಸುತ್ತಿರುವ  ಕಾಂಗ್ರೆಸ್ ಪಕ್ಷದ ಶಾಸಕ ಬಿ.ಕೆ. ಸಂಗ ಮೇಶ್ವರ ರವರ ಪರವಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ನಿಲ್ಲಲಿದ್ದೇವೆ. ಇರುವ ಎಲ್ಲಾ ಇಲಾಖೆಗಳನ್ನು ಮಾರಾಟ ಮಾಡುತ್ತಾ ದೇಶವನ್ನೇ ಮಾರಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಗೋಣಿ ಸಂದೀಪ್ ಪ್ರಕಾಶ್ ಸೈಫ್ ಉಲ್ಲಾ ಜಕ್ಕಿನ್ ಕೊಪ್ಪ ಕಾಂತೇಶ್ ದರ್ಶನ್ ಸೇರಿದಂತೆ ಹಲವರಿದ್ದರು.

1 ಕಾಮೆಂಟ್‌ಗಳು

ನವೀನ ಹಳೆಯದು