ಭದ್ರಾ ಜಲಾಶಯದಿಂದ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರ ವಿರೋಧ

 ವಿಜಯ ಸಂಘರ್ಷ



ಭದ್ರಾವತಿ : ತುಂಗಭದ್ರಾ ಜಲಾಶಯ ಕ್ಕೆ ಭದ್ರಾ ಜಲಾಶಯದಿಂದ 7 ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.


ತಾಲೂಕು ರೈತ ಸಂಘದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವರಿಷ್ಠ ರಾದ ಕೆ ಟಿ ಗಂಗಾಧರ್, ಭದ್ರಾ ಜಲಾ ಶಯದ ಅಚ್ಚುಕಟ್ಟು 1 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ದೀರ್ಘಾವಧಿ ಹಾಗು ಅಲ್ಪಾವಧಿ ಬೇಸಿಗೆ ಬೆಳೆ ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ನಿರ್ಣಯ ಆದೇಶ ಹೊರಡಿಸಿ ಎಡದಂಡೆ, ಬಲ ದಂಡೆ, ಮಲೆಬೆನ್ನೂರು, ಗೊಂದಿ ಜಲಾಶಯಕ್ಕೆ 136 ದಿನಗಳಿಗೆ ನೀರಿನ ಪ್ರಮಾಣ ನಿರ್ಧ ರಿಸಿ ನೀರನ್ನು ಬೆಳೆಗ ಳಿಗೆ ಈಗಾಗಲೇ 47 ದಿನಗಳ ನೀರನ್ನು ಒದಗಿಸಲಾಗಿದೆ. ಇನ್ನು 89 ದಿನಗಳ ನೀರನ್ನು ರೈತರ ಬೆಳೆಗೆ ಒಟ್ಟು 36.71 ಟಿಎಂಸಿ ನೀರನ್ನು ಹರಿಸಬೇಕಾಗಿದೆ. ಬೃಹತ್ ನಗರಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮಾತ್ರವಲ್ಲದೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸ ಲು 7048ಟಿಎಂಸಿ ನೀರನ್ನು ಜೋಪಾ ನ ಮಾಡಬೇಕಾಗಿದೆ. ಪ್ರಸ್ತುತ ನೀರಿನ ಪ್ರಮಾಣ ಗಮನಿಸಿದರೆ ಉಪಯೋಗ ಕ್ಕೆ ಅಗತ್ಯವಿರುವ ನೀರಿನ ಪ್ರಮಾಣ 37,586 ಟಿಎಂಸಿ ಇದ್ದು, ಆದರೆ ಜಲಾ ಶಯದಲ್ಲಿ ಬಳಸಬಹುದಾದ ನೀರಿನ ಪ್ರಮಾಣ ಲಭ್ಯತೆ 35.368 ಟಿಎಂಸಿ ಆಗಿದೆ. 2.218 ಟಿಎಂಸಿ ಪ್ರಮಾಣದ ನೀರಿನ ಕೊರತೆ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ಜಲಾಶ ಯ ದಿಂದ 7 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಯಾವು ದೇ ಕಾರಣಕ್ಕೂ ಹರಿಸಲು ಸಾಧ್ಯವಾ ಗುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ 7 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಬೇಕೆಂದರು.


ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಯಶವಂತರಾವ್ ಘೋರ್ಪಡೆ ಮಾತ ನಾಡಿ, ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಯಾವು ದೇ ಕಾರಣಕ್ಕೂ 7 ಟಿಎಂಸಿ ನೀರು ಹರಿಸಬಾರದು. ಸರ್ಕಾರದ ಪ್ರಸ್ತುತ ಹೊರಡಿಸಿರುವ ಆದೇಶದ ವಿರುದ್ಧ ಚಳುವಳಿ ರೂಪಿಸಬೇಕೆಂದರು.


ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪುಟ್ಟಪ್ಪ ಮಾತನಾಡಿ, ನೀರಾವರಿ ಸಲಹಾ ಸಮಿತಿ ನಿರ್ಣಯ ದಂತೆ ನೀರು ಪಡೆದುಕೊಳ್ಳುವುದು ನಮ್ಮ ಹಕ್ಕು. ಮೊದಲು ಅಚ್ಚುಕಟ್ಟು ದಾರರ ಬೆಳೆಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೂ ಉಳಿಸಿ ಕೊಳ್ಳುವುದು ನಮ್ಮ ಕರ್ತವ್ಯ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯದಿಂದ ನೀರು ಹರಿಸ ಬಾರದು ಎಂದರು.


ತಾಲೂಕು ರೈತ ಸಂಘದ ಅಧ್ಯಕ್ಷ ಹಿರಣ್ಣಯ್ಯ, ಅಗಸನಹಳ್ಳಿ ಹಿರಿಯ ರೈತ ಮುಖಂಡರಾದ ಯಲ್ಲಪ್ಪ, ಮೂರ್ತಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು