ವಿಐಎಸ್‌ಎಲ್ ಮುಚ್ಚುವ ನಿರ್ಧಾರ ಕೈಬಿಡಿ: ಶ್ರೀ ಮಲ್ಲಿ ಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ

 ವಿಜಯ ಸಂಘರ್ಷ



ಭದ್ರಾವತಿ:ಮೈಸೂರು ಮಹಾರಾಜರು ತಮ್ಮಲ್ಲಿದ್ದ ಬಂಗಾರ ಮಾರಾಟ ಮಾಡಿ ಸ್ಥಾಪಿಸಿದ ವಿಐಎಸ್‍ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲನೆ ಮಾಡ ಬೇಕು ಎಂದು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರರ ಪರಿಷತ್ ಅಧ್ಯಕ್ಷ ಆನಂದಪುರ ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಒತ್ತಾಯಿಸಿದರು.


ವಿಐಎಸ್‍ಎಲ್ ಉಳಿಸಿ ಹೋರಾಟ ಗಾರರಿಗೆ ಬೆಂಬಲಿಸಿ ನೈತಿಕ ಆತ್ಮಸ್ಥೈ ರ್ಯ ತುಂಬಲು ಹೋರಾಟದ ಸ್ಥಳಕ್ಕೆ ಸುಮಾರು 16 ಮಂದಿ ವಿವಿಧ ಮಠಾ ಧಿಪತಿಗಳೊಂದಿಗೆ ಬಂದು ಮಾತನಾಡಿದರು.


'ಪರಿಷತ್ತು ಸಾಮಾಜಿಕ ಸಮಸ್ಯೆಗಳ ಸ್ಪಂದನೆಗಾಗಿ ರಚಿಸಲ್ಪಟ್ಟಿದೆ. ಬಿಳಿಕಿ ಶ್ರೀಗಳಿಂದಾಗಿ ವಿಐಎಸ್‍ಎಲ್ ವಿಚಾರ ಹೊತ್ತು ಬಂದಿದ್ದೇವೆ. ಇಂದು ಪರಿಷತ್ತಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಕಾರ್ಖಾನೆ ಕುರಿತು ಮಾತನಾಡಿದ್ದೇವೆ. ಬೆಂಕಿಯಲ್ಲಿ ಬೆಂದು ಬೆವರು ಸುರಿಸು ವ ನಿಮ್ಮೆಲ್ಲರ ಬದುಕು ಬೀದಿಗೆ ಬೀಳ ಬಾರದು. ದೇಶ ಆಳುವವರು ಸಾಮಾ ಜಿಕವಾಗಿ ಚಿಂತಿಸಬೇಕು. ಇಲ್ಲದಿದ್ದಲ್ಲಿ ಶ್ರಮಿಕರ ಶಾಪ ತಟ್ಟದೇ ಬಿಡದು. ಹಿಂದೆ ತುಂಗಭದ್ರಾ ಶುಗರ್ಸ್ ಮುಚ್ಚಿ ಇಂದಿಗೂ ಶಿವಮೊಗ್ಗ ಆರ್ಥಿಕ ವಾಗಿ ಸದೃಢವಾಗಿಲ್ಲ. ಅದೇ ರೀತಿ ವಿಐಎಸ್‍ ಎಲ್ ಮುಚ್ಚಿದರೆ ಗಂಭೀರ ಸ್ಥಿತಿ ಉಂಟಾಗುತ್ತದೆ' ಎಂದರು.


ಕಾರ್ಖಾನೆ ಮುಚ್ಚುವ ನಿರ್ಧಾರ ಸರ್ಕಾರ ಪುನರ್ ಪರಿಶೀಲನೆ ಮಾಡ ಲಿ ಎಂದು ಪರಿಷತ್ತು ಒತ್ತಾಯಿಸುತ್ತದೆ. ನಮ್ಮ ನಿಮ್ಮೆಲ್ಲರ ಧ್ವನಿ ಸರಕಾರಕ್ಕೆ ಮುಟ್ಟಿ ಕಾರ್ಖಾನೆ ಉಳಿಯಲಿ ಎಂದು ಆಶಿಸುತ್ತದೆ ಎಂದರು.


ಬಿಳಿಕಿ ಹಿರೇಮಠದ ಶ್ರೀಗಳು, ಶಿರಾಳ ಕೊಪ್ಪ, ಬಸವಕೇಂದ್ರ, ಹಾರ್ನಹಳ್ಳಿ, ಹುಣಸಘಟ್ಟ, ಕಡೆನಂದಿಹಳ್ಳಿ, ಗೊಗ್ಗೆಹಳ್ಳಿ, ಮೂಲೆಗದ್ದೆ, ಕೋಣಂ ದೂರು, ಶಿಕಾರಿಪುರ, ಗುತ್ತಲಕಲ್ಮಠ,ತೊಗರ್ಸಿ, ಗೇರ್‌ಕೊಪ್ಪ, ಬೆಳ್ಳಿಗಾವಿ, ಸುರಿಗೆಹಳ್ಳಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು