ಸಾಗರ :ಆನಂದಪುರದ ಶ್ರೀಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರೆಯ ಆರಂಭದ ದಿನ ಮಂಗಳವಾರ ರಾತ್ರಿ ತವರು ಮತ್ತು ಗಂಡನ ಮನೆಯವರು, ಅಸಾದಿ ಜನಾಂಗ,ಚೌಟಗಿ, ಮಾತಂಗಿ, ಅರ್ಚಕರು ಹಾಗೂ ಸಾವಿರಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಅಮ್ಮನವರ ತವರುಮನೆಯಲ್ಲಿ ಉತ್ಸವಮೂರ್ತಿ ಯ ಪ್ರತಿಷ್ಠಾಪನೆ, ಅಲಂಕಾರ ಮತ್ತು ದೃಷ್ಠಿ ಇಡುವುದು, ಕಂಕಣ, ಮಾಂಗಲ್ಯ ಧಾರಣೆ, ಮಹಿಳೆಯರಿಂದ ಉಡಿ ತುಂಬುವ ಶಾಸ್ತ್ರದ ನಂತರ ಗಂಡನ ಮನೆಗೆ ದೇವಿ ಹೋಗಲು ನಿರಾಕರಿ ಸಿದಾಗ ಅಸಾದಿ ಜನಾಂಗದವರು ದೇವಿಯನ್ನು ನಿಂದಿಸುವ ಸಾಂಪ್ರದಾ ಯಿಕ ಪದ್ಧತಿ ನಡೆದ ಮೇಲೆ ಅಮ್ಮನ ವರನ್ನು ಭವ್ಯ ಮೆರವಣಿಗೆಯ ಮೂಲ ಕ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಮಂಗಳ ವಾದ್ಯಗಳೊಂದಿಗೆ ರಾಜಬೀದಿ ಉತ್ಸವದಲ್ಲಿ ಗಂಡನ ಮನೆಗೆ ಕರೆತಂದು ಅಲಂಕೃತ ಮಂಟ ಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬುಧವಾರ ನಸುಕಿನಿಂದಲೇ ಅಮ್ಮನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಭಕ್ತರು ಆಗಮಿಸುತ್ತಿದ್ದರು. ವಸ್ತ್ರ,ಹಣ್ಣು, ಕಾಯಿ, ಮಡ್ಲಕ್ಕಿಯನ್ನು ಮುತೈದೆಯರು ದೇವಿಗೆ ಸಮರ್ಪಿಸಿ ಧನ್ಯತಾ ಭಾವ ಮೆರೆದರು. ಬಿಸಿಲಿನ ತಾಪವನ್ನು ಭಕ್ತರಲ್ಲಿ ಇಂಗಿಸಲು ಆನಂ ದಪುರದ ವಿವಿಧ ಸಮಾಜಮುಖಿ ಸಂಘಟನೆಗಳವರು ದೇವಾಲಯದ ಆವರಣದಲ್ಲಿ ಕುಡಿಯುವ ನೀರು, ಮಜ್ಜಿಗೆ, ಪಾನಕ ವಿತರಣೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

 ವಿಜಯ ಸಂಘರ್ಷ



ಸಾಗರ :ಆನಂದಪುರದ ಶ್ರೀಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರೆಯ ಆರಂಭದ ದಿನ ಮಂಗಳವಾರ ರಾತ್ರಿ ತವರು ಮತ್ತು ಗಂಡನ ಮನೆಯವರು, ಅಸಾದಿ ಜನಾಂಗ,ಚೌಟಗಿ, ಮಾತಂಗಿ, ಅರ್ಚಕರು ಹಾಗೂ ಸಾವಿರಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಅಮ್ಮನವರ ತವರುಮನೆಯಲ್ಲಿ ಉತ್ಸವಮೂರ್ತಿ ಯ ಪ್ರತಿಷ್ಠಾಪನೆ, ಅಲಂಕಾರ ಮತ್ತು ದೃಷ್ಠಿ ಇಡುವುದು, ಕಂಕಣ, ಮಾಂಗಲ್ಯ ಧಾರಣೆ, ಮಹಿಳೆಯರಿಂದ ಉಡಿ ತುಂಬುವ ಶಾಸ್ತ್ರದ ನಂತರ ಗಂಡನ ಮನೆಗೆ ದೇವಿ ಹೋಗಲು ನಿರಾಕರಿ ಸಿದಾಗ ಅಸಾದಿ ಜನಾಂಗದವರು ದೇವಿಯನ್ನು ನಿಂದಿಸುವ ಸಾಂಪ್ರದಾ ಯಿಕ ಪದ್ಧತಿ ನಡೆದ ಮೇಲೆ ಅಮ್ಮನ ವರನ್ನು ಭವ್ಯ ಮೆರವಣಿಗೆಯ ಮೂಲ ಕ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಮಂಗಳ ವಾದ್ಯಗಳೊಂದಿಗೆ ರಾಜಬೀದಿ ಉತ್ಸವದಲ್ಲಿ ಗಂಡನ ಮನೆಗೆ ಕರೆತಂದು ಅಲಂಕೃತ ಮಂಟ ಪದಲ್ಲಿ ಪ್ರತಿಷ್ಠಾಪಿಸಲಾಯಿತು.


 ಬುಧವಾರ ನಸುಕಿನಿಂದಲೇ ಅಮ್ಮನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಭಕ್ತರು ಆಗಮಿಸುತ್ತಿದ್ದರು.


ವಸ್ತ್ರ,ಹಣ್ಣು, ಕಾಯಿ, ಮಡ್ಲಕ್ಕಿಯನ್ನು ಮುತೈದೆಯರು ದೇವಿಗೆ ಸಮರ್ಪಿಸಿ ಧನ್ಯತಾ ಭಾವ ಮೆರೆದರು. ಬಿಸಿಲಿನ ತಾಪವನ್ನು ಭಕ್ತರಲ್ಲಿ ಇಂಗಿಸಲು ಆನಂ ದಪುರದ ವಿವಿಧ ಸಮಾಜಮುಖಿ ಸಂಘಟನೆಗಳವರು ದೇವಾಲಯದ ಆವರಣದಲ್ಲಿ ಕುಡಿಯುವ ನೀರು, ಮಜ್ಜಿಗೆ, ಪಾನಕ ವಿತರಣೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743221579

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು