ವಿಜಯ ಸಂಘರ್ಷ
ಶಿಕಾರಿಪುರ: ಪರಿಶಿಷ್ಟ ಜಾತಿಸೇರಿದ ಜನಾಂಗದವರೇ ಸ್ವಚ್ಛತೆ ಮಾಡುವ ಕೆಲಸವನ್ನು ಅನಾದಿ ಕಾಲದಿಂದ ಮಾಡುತ್ತಿದ್ದು ಈಗ ಪೌರಕಾರ್ಮಿಕರು ನೇಮಕಾತಿ ಖಾಯಂ ಮಾಡುವ ಸಂಧರ್ಭದಲ್ಲಿ ಸರ್ಕಾರ ರೋಸ್ಟ್ ಗಾರ್ ಪದ್ಧತಿ ಜಾರಿ ಮಾಡಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹಕ್ಕು ಕಸಿಯುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಆರೋಪಿಸಿದರು.
ಸುದ್ದಿ ಘೋಷ್ಟಿಯಲ್ಲಿ ಮಾತನಾಡಿದ ಅವರು ರಾಜ ಮಹಾರಾಜರ ಕಾಲದಿಂದಲೂ ಸ್ವಚ್ಛತೆಯ ಕೆಲಸ ಸೇರಿದಂತೆ ಹಲವು ಶುದ್ದಿ ಕರಿಸುವ ಕೆಲಸವನ್ನು ಎಸ್ ಸಿ ಜನಾಂಗದವರು ಮಾಡುತ್ತಿದ್ದು ಬ್ರಿಟಿಷ್ ಕಾಲದಲ್ಲಿ, ಸ್ವತಂತ್ರ ನಂತರದಲ್ಲಿ ಸ್ವಚ್ಛತೆಗೆ ಕಾರ್ಪೋರೇಶನ್, ನಗರಸಭೆ , ಪುರ ಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿ ರುವುದು ಎಲ್ಲರಿಗೂ ತಿಳಿದ ವಿಚಾರ ಆಗಿದೆ. ಪೌರಕಾರ್ಮಿಕರು ಖಾಯಂ ನೇಮಕಾತಿ ಮಾಡುವಂತೆ ಹೋರಾಟ ನಡೆಸಿದ ಫಲವಾಗಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಯಿ ನೇರಪಾವತಿಯ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಿದ್ದು ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಆದೇಶ ಹೊರಡಿಸಿದೆ ದಿನಾಂಕ 17 - 01 2023 ಕ್ಕೆ ಆರ್ಜಿ ಸಲ್ಲಿಸಲು ಆದ್ದೇಶಿಸಿದೆ ಆದರೆ ಇದುವ ರೆಗೂ ಪುರಸಭೆ ಪೌರಕಾರ್ಮಿಕರಿಗೆ ಯಾವುದೇ ಅರ್ಜಿ ನೀಡಿಲ್ಲ, ಹಾಗೂ ಸರ್ಕಾರ ಪೌರಕಾರ್ಮಿಕರ ನೇಮ ಖಾತಿಯಲ್ಲಿ ರೋಸ್ಟ್ ಗಾರ್ ಪದ್ಧತಿ ಜಾರಿ ಮಾಡಿದ್ದು, ಈ ಪದ್ಧತಿಯ ಆಯ್ಕೆ ಯಂತೆ ಒ ಬಿ ಸಿ, ಜನರಲ್, ಎಸ್ ಸಿ/ಎಸ್ ಟಿ, ಮಾಜಿ ಸೈನಿಕರು, ಅಂಗವಿಕಲ ಎಂದು ವಿಂಗಡಣೆ ಮಾಡಿ ಎಸ್ ಸಿ ಜನತೆ ಅನಾದಿ ಕಾಲದಿಂದ ಸ್ವಚ್ಛತೆ ಕೆಲಸ ಮಾಡಿಕೊಂಡು ಬಂದಿದ್ದ ಎಸ್ ಸಿ ಯವರ ಕೆಲಸ ಹಕ್ಕು ಕಸಿದು ಕೊಳ್ಳುವ ಕೆಲಸಕ್ಕೆ ಸರ್ಕಾರ ಕೈ ಹಾಕಿದ್ದು ಸಂಘಟನೆ ವಿರೋಧಿಸುತ್ತದೆ, ಎಸ್ ಸಿ ಯ ಮೀಸಲಾತಿಯನ್ನು ಕಸಿದುಕೊಂಡು ಶಿಕಾರಿಪುರದಲ್ಲಿರುವ 21 ಪೌರಕಾರ್ಮಿಕರಲ್ಲಿ 4-5 ಕಾರ್ಮಿಕ ರನ್ನು ಮಾತ್ರ ಖಾಯಂ ಮಾಡಿ, ಉಳಿದ ಹುದ್ದೆಗಳನ್ನು ಕಸಿಯುವ ಹುನ್ನಾರ ನಡೆಸದೇ ಎಲ್ಲರನ್ನು ಖಾಯಂ ಮಾಡಲೇ ಬೇಕು, ಇಲ್ಲಿ ರಾಜಕೀಯ ಇರಬಾರದು.
ಇನ್ನುಳಿದಂತೆ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಟರ್ ಸಪ್ಲೆಯ ನೀರುಗಂಟಿ ಮತ್ತು ಗುತ್ತಿಗೆ ನೌಕರರ ನ್ನು ಕೂಡ ಖಾಯಂ ಮಾಡಲು ಮುಖ್ಯಮಂತ್ರಿಗಳು ಮತ್ತು ಪೌರ ಸಚಿವರು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಮುಖಂಡ ಇಮ್ರಾನ್ ಮಾತನಾಡಿ ಓಟಿಗಾಗಿ ಯಾರದೋ ಹಕ್ಕು ಕಸಿದು ಇನ್ನೊಬ್ಬರಿಗೆ ಹಕ್ಕು ಕಲ್ಪಿಸಿಕೊಡುವುದು ಸಂವಿದಾನ ವಿರೋಧಿ ಕೆಲಸ ಎಂದರು.
ಸುರೇಶ್ ಮಾತನಾಡಿ ಅನಾದಿ ಕಾಲದಿಂದಲೂ ಹಿಂದುಳಿದ ಜನಾಂಗದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಈಗ ಪೌರಕಾರ್ಮಿಕರ ನೇಮಕಾತಿ ವಿಚಾರದಲ್ಲಿ ಸಂವಿಧಾ ನದ ಹಕ್ಕು ಕಸಿದುಕೊಳ್ಳುವ ಕೆಲಸ ಆಗಬಾರದು ಎಂದು ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಕೂಡ ಮಾಡಲಾಗಿದೆ ಎಂದರು.
ಸುದ್ದಿಘೋಷ್ಟಿ ಯಲ್ಲಿ ಸಂಘಟನೆ ಮುಖಂಡರಾದ ಮಾಲತೇಶ್ ಮಟ್ಟಿಕೋಟೆ, ಪ್ಲಾಸ್ಟಿಕ್ ಇಮ್ರಾನ್ ಖಾನ್, ಗಣೇಶ್, ಯಮುನಪ್ಪ , ಶಾರುಖ್ ಖಾನ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795