ವಿಐಎಸ್ ಎಲ್ ಕಾರ್ಖಾನೆ ಆರಂಭಿಸಲು ಪ್ರಯತ್ನಿಸ ಲಾಗಿದೆ- ಬಿ.ವೈ.ಆರ್

ವಿಜಯ ಸಂಘರ್ಷ



ಭದ್ರಾವತಿ:ವಿಐಎಸ್ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಮಾರ್ಗ ಮುಚ್ಚಿಲ್ಲವೆಂದು ಸಂಸದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಐ ಎಸ್ ಎಲ್ ಆರಂಭಿಸಲು ಪ್ರಯತ್ನಿಸ ಲಾಗಿದೆ ಸವಾಲೆದು ರಾಗಿದೆ.‌ ನಿನ್ನೆ ಸಿಎಂ ಜೊತೆ ಮಾತನಾಡಿ ವಿಐಎಸ್ ಎಲ್ ಉಳಿಸುವ ಕುರಿತು ಪ್ರಸ್ತಾಪಿಸಿರುವೆ.ಸಂಸ್ಥೆಯನ್ನ ಉಳಿಸಿಕೊಂಡು ಹೋಗ ಲು ತಯಾರಿದೆ. ಕಾರ್ಮಿಕ ಮುಖಂಡ ರ ಜೊತೆ ಸಭೆ ಕರೆಯಲಾಗಿದೆ.


ಹೊಸ ಪ್ರಯತ್ನವಿಲ್ಲ. ಉಳಿದ ದಿನ ಗಳಲ್ಲಿ ಹೇಗೆ ಹೋರಾಟ ಮಾಡ ಲಾಗುವುದು ಯೋಚಿಸಲಾಗುತ್ತಿದೆ. ವಿಐಎಸ್ ಎಲ್ ಕ್ವಾಟ್ರಸ್ ಉಳಿಸಿ ಕೊಳ್ಳಲು ದೆಹಲಿಗೆ ಡೆಲಿಗೇಷನ್ ಹೋಗಿದ್ದಾರೆ. ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ದಿಂದಲೇ ವಾಪಾಸ್ ಪಡೆದು ನಡೆಸುವ ಪ್ರಯತ್ನ ಗಳಿವೆ ಯಾವುದೂ ಮುಚ್ಚಿಲ್ಲವೆಂದ ಸಂಸದರು ಒಂದು ವಾರದ ನಂತರ ಯಾವುದು ಸೂಕ್ತವೆಂದು ತಿಳಿದು ಮುಂದು ವರೆಯಲಾಗುವುದು ಎಂದರು.


ನೂರು ವರ್ಷದ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ ಸಾರ್ವಜ ನಿಕರ ಆಕ್ರೋಶ ಸಹಜ. ಪ್ರತಿಭಟನೆ, ಘೇರಾವ್ ಇವೆಲ್ಲಾವೂ ಸಹಜ. ಆದರೆ ಅದನ್ನ ಯಾವ ರೀತಿಯಲ್ಲಿ ಉಳಿಸಿ ಕೊಳ್ಳಬಹುದು ಎಂದು ಯೋಚಿಸ ಲಾಗುತ್ತಿದೆ ಎಂದರು.


ಶರಾವತಿ ಮುಳುಗಡೆ ಸಂತ್ರಸ್ತರಿಗೆ 9500 ಎಕರೆ ಜಮೀನನ್ನ ಉಳುಸಲು ಕೇಂದ್ರಕ್ಕೆ ಕಳುಹಿಸಲು ಒಪ್ಪಿಗೆ ನೀಡ ಲಾಗಿದೆ. ಕೇಂದ್ರಕ್ಕೆ ಹೋದ ಮೇಲೆ ವಾಪಾಸ್ ಬರಬಾರದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು