ವಿಜಯ ಸಂಘರ್ಷ
ಭದ್ರಾವತಿ: ನಗರದ ಬಿಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಭೆ ನಡೆಯಿತು.
ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಗಂಗಾಧರ್ ನೇತೃತ್ವವಹಿಸಿ ಮಾತನಾಡಿ, ತಾಲೂಕು ಕಚೇರಿ ರಸ್ತೆ ದುರಸ್ತಿ ಆಗದಿರುವುದನ್ನು ಖಂಡಿಸಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದ್ದರು ಸಹ ಇನ್ನು ರಸ್ತೆ ಕಾಮ ಗಾರಿಬೇಕಾಬಿಟ್ಟಿ ಮಾಡಿರುವ ಉದ್ದೇಶದಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.ಕೂಡಲೇ ಸರಿಪಡಿಸಲು ಒತ್ತಾಯಿಸ ಲು ಸಭೆಯಲ್ಲಿ ಚರ್ಚಿಸಲಾಯಿತು.
ಅಲ್ಲದೆ ಇತ್ತೀಚಿಗೆ ರಾಜ್ಯ ಯುವ ಕಾಂಗ್ರೆಸ್ ವಕ್ತಾರ ವರುಣ್ ಗೌಡ ರವರಿಗೆ ಜೆಡಿಎಸ್ ಪಕ್ಷದ ವ್ಯಕ್ತಿ ಯೊರ್ವ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಶಾಸಕರ ಅಭಿವೃದ್ಧಿ ಕಾರ್ಯ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಲುವ ಭಯದಲ್ಲಿ ಇಂತಹ ಘಟನೆಗಳನ್ನು ಸೃಷ್ಟಿ ಮಾಡು ತ್ತಿದ್ದಾರೆ ಎಂದು ಗಂಗಾಧರ್ ಕಿಡಿಕಾರಿದರು.
ಸಭೆಯಲ್ಲಿ ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.