ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ: ನಗರದಲ್ಲಿ 144 ಸೆಕ್ಷನ್ ಜಾರಿ

 ವಿಜಯ ಸಂಘರ್ಷ



ಶಿಕಾರಿಪುರ : ರಾಜ್ಯ ಸರ್ಕಾರ ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಬಂಜಾರ ಸಮುದಾ ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲೂಕು ಬಂಜಾರ್ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.


        ರಾಜ್ಯ ಸರ್ಕಾರ ಘೋಷಿಸಿದ ಮೀಸಲಾತಿಯ ಬದಲಾವಣೆಯನ್ನು ಖಂಡಿಸಿ, ಮೀಸಲಾತಿಯಲ್ಲಿ ಸಮುದಾ ಯಕ್ಕೆ ಅನ್ಯಾಯವಾಗಿದೆ ಎಂದು ಶ್ರೀ ಸೈನಾ ಭಗತ್ ಸಾಲೂರು ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ತಾಲೂ ಕಿನ ಬಂಜಾರ್ ಸಮುದಾಯ ಇಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಕಾರರು ಜಮಾವಣೆಗೊಂಡು ಸರ್ಕಾರ ದ ವಿರುದ್ಧ ಹಾಗೂ ಯಡಿಯೂರಪ್ಪ ನವರ ವಿರುದ್ಧ ಘೋಷಣೆ ಕೂಗಿದರು.

     

    ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕಳೆದ ತಿಂಗಳು ದಿನಾಂಕ 27 - 2 -23 ರಂದು ನೀಡಿದ್ದ ಸೀರೆ ಹಾಗೂ ನಗರದ ಲ್ಲಿ ಅಳವಡಿಸಿದ್ದ ಬಿಎಸ್ ವೈ ಮತ್ತು ಪುತ್ರರ ಪ್ಲೆಕ್ಸ್ ಬ್ಯಾನರ್ ಗಳನ್ನು ಹರಿದು ಪ್ರಮುಖ ವೃತ್ತಗಳಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಉದ್ರಿಕ್ತ ಪ್ರತಿಭಟನಾಕಾರರನ್ನು ತಡೆಯಲು ಪೋಲೀಸರು ಹರಸಾಹಸ ಪಡಬೇಕಾಯಿತು. ಆದರೆ ಪೊಲೀಸರಿ ಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ವೃತ್ತಗಳಲ್ಲಿ ಟೈರ್ ಗಳಿಗೆ ಸೀರೆಗಳಿಗೆ ಬೆಂಕಿ ಹಚ್ಚಿ ಪೋಲಿಸ್ ನವರು ಅಳವಡಿಸಿದ್ದ ಬ್ಯಾರಿಕೆಟ್ ಗಳನ್ನು ಕಿತ್ತೆಸೆದು ನಗರದ ಮಾಳೆರ್ ಕೇರಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಕೇರಿಗೆ ನುಗ್ಗಲು ಯತ್ನಿಸಿ ದರು ಈ ವೇಳೆ ಉದ್ರಿಕ್ತ ಗುಂಪು ಪೊಲೀಸ್ ನವರನ್ನು ತಳ್ಳಿಕೊಂಡು ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಹಾನಿಗೊಳಿಸಿದರು.

          

  ಈ ವೇಳೆ ಕೆಲವು ಪ್ರತಿಭಟನಾ ಯುವಕರು ಯಡಿಯೂರಪ್ಪನವರ ಮನೆಯ ಹತ್ತಿರವಿರುವ ಬಿಜೆಪಿ ಕಚೇರಿಯ ಮೇಲೆ ಹತ್ತಿ ಬಿಜೆಪಿಯ ಧ್ವಜವನ್ನು ಕಿತ್ತೆಸೆದು ಆಕ್ರೋಶ ವ್ಯಕ್ತ ಪಡಿಸಿದರು, ಸಮಯದ ಸೂಕ್ಷ್ಮತೆ ಅರಿತ ಪೊಲೀಸರು ಪ್ರತಿಭಟನಾಕಾ ರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ಹತ್ತಿಕ್ಕಿದ್ದಾರೆ. ಈ ವೇಳೆ ಕೆಲವು ಪ್ರತಿಭಟನಾಕಾರರಿಗೆ ಹಾಗೂ ಪೊಲೀಸ್ ನವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

     

ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಶಾಂತಿ ಕದಡದಂತೆ ಪೊಲೀಸ್ ಇಲಾಖೆ144 ಸೆಕ್ಷನ್ ಜಾರಿ ಮಾಡಿ ಬಸ್ ನಿಲ್ದಾಣದ ಕೆಲವು ಅಂಗಡಿ ಮುಂಗ ಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಸಧ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು ನಗರದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ.

                      ವರದಿ : ಹುಲಿಗಿ ಕೃಷ್ಣ


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು