ವಿಜಯ ಸಂಘರ್ಷ
ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-24 ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾನು- ತರಕಾರಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಮಾತನಾಡಿ ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ, ಮಲೆನಾಡಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಜನಸೇವೆ ಯಲ್ಲಿ ನಿರತವಾಗಿದೆ, ವಸತಿ ಸೌಕರ್ಯ ಹೊಂದಿರುವ ಈ ಅಂಧರ ಸಂಗೀತ ಶಾಲೆಯಲ್ಲಿ ಅನೇಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ, ಅದಕ್ಕೆ ಸಂಗೀತ ದೇವರೆಂದೇ ಪ್ರಸಿದ್ದಿ ಯಾಗಿರುವ ಶ್ರೀ ಪುಟ್ಟರಾಜ ಗವಾಯಿ ಗಳ ಕೃಪಾಕಟಾಕ್ಷವೇ ಸಾಕ್ಷೀಯಾಗಿದೆ, ಇಲ್ಲಿ ಕೂಡ ಯಾವ ನೀರಿಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಕಲಾವಿದ ರನ್ನಾಗಿ ರೂಪುಗೊಳಿಸಿ ಸಾರಸ್ವತಾ ಲೋಕದಲ್ಲಿ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಐಪಿಪಿ.ಜೆಸಿ ಸೌಮ್ಯ ಅರಳಪ್ಪನವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಇಲ್ಲಿ ಸೇರ್ಪಡೆಯಾಗಿ ಉಚಿತವಾಗಿ ಸಂಗೀತ ಅಭ್ಯಾಸಿಗಳಾಗಿ ಭಕ್ತಿ ಶ್ರದ್ಧೆ ಹೊಂದಿರುವುದಕ್ಕೆ ಇಲ್ಲಿನ ಸಂಗೀತಮಯದ ವಾತಾವರಣವೇ ಕಾರಣವಾಗಿದೆ, ಭಗವಂತನ ಸೃಷ್ಟಿ ಯಲ್ಲಿ ಹುಟ್ಟು ಅಂಗವಿಕಲತೆ, ಅಂಧ ರಾಗಿರುವ ಮಕ್ಕಳು, ವಯಸ್ಕರು, ಸಂಗೀತ ಶಾಲೆಯಲ್ಲಿ ಆತ್ಮರಾಗವನ್ನು ಕಲಿತು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವುದು ಇಂದಿನ ರಿಯಾಲಿಟಿ ಶೋ ಗಳಲ್ಲಿ ನಾವು ನೋಡಿದ್ದೇವೆ ಈ ಸಂಸ್ಥೆಯಿಂದಲು ಸ್ಪರ್ಧಿಗಳಾಗಿರುವುದು ದರ್ಶಿಸಿದ್ದೇವೆ ಎನ್ನುವುದಕ್ಕೆ ಶ್ರೀ ಗಳ ಅಂತರ್ಮುಖಿ ಆಶೀರ್ವಾದವೇ ಕಾರಣ ಎನ್ನಬಹುದು ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ. ಸ್ಮಿತಾ ಮೋಹನ್, ಜೆಸಿ.ಗಾರಾ. ಶ್ರೀನಿವಾಸ್, ಜೆಸಿ.ಪರಮೇಶ್ವರ, ಜೆಸಿ.ದಿವ್ಯಾ ಪ್ರವೀಣ್, ಜೆಸಿ.ಸ್ವಪ್ನ ಸಂತೋಷ್ ಗೌಡ, ಜೆಸಿ.ಚಿರಂಜೀವಿ ಬಾಬು, ಜೆಸಿ.ಚಂದ್ರಹಾಸ್ ಎನ್ ರಾಯ್ಕರ್, ಜೆಸಿ.ಮಂಜುನಾಥ್, ಜೆಸಿ.ಸಂದೇಶ್ ಸೇರಿದಂತೆ ಸಂಗೀತ ಶಾಲೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795