ಬಿಎಸ್ ವೈ ಹೇಳೋದೇ ಒಂದು ಮಾಡೋದು ಇನ್ನೊಂದು : ಕಾಂಗ್ರೆಸ್ ಆರೋಪ

 ವಿಜಯ ಸಂಘರ್ಷ



ಶಿಕಾರಿಪುರ : ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಮಾಡಿರುವುದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿ ರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಂಸದರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಗುರುವಾರ ಪತ್ರಿಕಾ ಘೋಷ್ಠಿ ನಡೆಸಿದರು.


ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ವಾಗಿದೆ ಎಂದು ಪಕ್ಷಾತೀತವಾಗಿ ಬಂಜಾರ್ ಬೋವಿ ಕೊರಮ ಸಮಾಜ ದ ಮುಖಂಡರು ಸಭೆ ಕರೆದು ಪ್ರತಿ ಭಟನೆ ಮಾಡಿದ್ದರು. ತಹಶೀಲ್ದಾರ್ ಮನವಿ ಸ್ವೀಕರಿಸದಿದ್ದಾಗ ತಾಲೂಕಿನ ಶಾಸಕರ ಮನೆಗೆ ಮನವಿ ನೀಡಲು ಹೋದರೆ ಪೋಲಿಸ್ ನವರಿಂದ ಲಾಟಿಚಾರ್ಜ್ ಮಾಡಿಸಿದ್ದಾರೆ, ಮನವಿ ನೀಡಲು ಹೋದ ಮುಗ್ಧ ಮಹಿಳೆಯ ರು, ಸಮಾಜದ ಬಂಧುಗಳಿಗೆ ಲಾಠಿ ಚಾರ್ಜ್ ಮಾಡಿಸಿ ದೌರ್ಜನ್ಯ ಮೆರೆದಿ ದ್ದಾರೆ. ಲಾಟಿಚಾರ್ಜ್ ಮಾಡಿದಾಗ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡಿದ್ದಾರೆ, ಈ ಘಟನೆಗೆ ಕಾಂಗ್ರೆಸ್ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ಖಂಡಿಸುತ್ತೇವೆ, ಇಂತಹ ಕೀಳು ರಾಜ ಕೀಯ ಮಾಡುವಾಗ ಅಗತ್ಯ ಕಾಂಗ್ರೆಸ್ಸಿಗೆ ಇಲ್ಲ.ತಾವು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಮೇಲೆ ದೂರುತ್ತಿದ್ದು ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದರು.


ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ ಹಿಂದುಳಿದ ಸಮಾಜದವರ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರಕ್ಕೆ ಇಡೀ ಬಂಜಾರ ಕೊರಮ ಕೊರಚ ಸಮಾಜದವರು ಕೇವಲ ಶಿಕಾರಿಪುರ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ತಿರುಗಿ ಬಿದ್ದಿದ್ದಾರೆ, ಯಡಿಯೂರಪ್ಪರವರಿಗೆ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಕಾರಣಕರ್ತರಾದ ಸಮಾಜದವರ ಮೇಲೆ ಈ ರೀತಿಯ ಲಾಟಿಚಾರ್ಜ್ ದಬ್ಬಾಳಿಕೆ ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಪದೇ ಪದೇ ಈ ರೀತಿಯ ಹೇಳಿಕೆ ನೀಡುವುದನ್ನು ವಿರೋಧಿಸುತ್ತೇವೆ. ಯಡಿಯೂರಪ್ಪ ಮತ್ತು ಸಂಸದರು ನಡೆಸುತ್ತಿರುವ ದೌರ್ಜನ್ಯವೇ ಇದಕ್ಕೆ ಕಾರಣವಾಗಿದೆ ಎಂದರು.


ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ಮಾತನಾಡಿ ಜನತೆಯ ಕರುಣೆ ಗಿಟ್ಟಿಸಲು ಯಾರ ಮೇಲೆಯೂ ಪೊಲೀಸರು ಕ್ರಮ ಜರುಗಿಸಬೇಡಿ ಎಂದು ಹೇಳಿಕೆ ನೀಡಿ ಮತ್ತೊಂದು ಕಡೆ ದ್ವೇಷದ ರಾಜಕಾರಣ ಮಾಡಿ ನಮ್ಮ ಪಕ್ಷದ ಕಾರ್ಯಕರ್ತರನ್ನೇ ಗುರಿಯಾಗಿಸಿ ಬಂಧನ ಮಾಡಿಸುವ ನೀಚ ರಾಜಕಾರಣವನ್ನು ಅಪ್ಪ ಮತ್ತು ಮಗ ಮಾಡಿರುವುದು ದುರಂತ ಯಡಿ ಯೂರಪ್ಪ ಹೇಳುವುದೇ ಒಂದು ಮಾಡುವುದೇ ಇನ್ನೊಂದು ಇಲ್ಲಿ ವಾಸ್ತವವಾಗಿ ಮುಗ್ಧರ ಮೇಲೆ ನಡೆಯುತ್ತಿರುವ ದೌರ್ಜನ್ಯವೇ ಬೇರೆಯಾಗಿದೆ ಎಂದರು.


ಬಂಜಾರ್ ಸಮಾಜದ ಮುಖಂಡ ಶಿವ್ಯ ನಾಯ್ಕ್ ಮಾತನಾಡಿ ನಮ್ಮ ಸಮುದಾ ಯದ ಬಿಜೆಪಿಯ ಮುಖಂಡರು ಪ್ರತಿಭಟನೆಗೆ ಕರೆದಿದ್ದರು ಸಮುದಾ ಯಕ್ಕೆ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆ ಮಾಡಿ ಎಲ್ಲರೂ ಸೇರಿ ಮಾಡಿದ್ದೆವು ಆದರೆ ಉದ್ದೇಶಪೂ ರ್ವಕವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆಕೂರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


   ವರದಿ ಹುಲಿಗಿ ಕೃಷ್ಣ

 ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು