ಕರವೇ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ .

 ವಿಜಯ ಸಂಘರ್ಷ



ಭದ್ರಾವತಿ : ವಿಐಎಸ್ಎಲ್ ಕಾರ್ಖಾ ನೆ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಬೆಂಬಲ ವ್ಯಕ್ತಪಡಿಸಿದರು.


ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮ ಶೇಖರ್ ನೇತೃತ್ವದಲ್ಲಿ ಶುಕ್ರವಾರ ನಗರದ ಬಿಳಿಕಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ನೂರು ವರ್ಷದ ಇತಿಹಾಸ ಇರುವ ವಿಐಎಸ್ಎಲ್ ಕಾರ್ಖಾನೆ ಶತಮಾನತ್ಸವ ಆಚರಿಸುವುದನ್ನು ಬಿಟ್ಟು ಮರಣೋತ್ಸವ ಆಚರಿಸುವಂತಾಗಿದೆ ಎಂದು ವಿಷಾಧವ್ಯಕ್ತ ಪಡಿಸಿದರು.


ಈ ಕೂಡಲೇ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಸೂಕ್ತ ಬಂಡವಾಳ ತೊಡಗಿಸಿ ಕಾರ್ಮಿಕರ ಬವಣೆ ಅರ್ಥ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ ಅವರು ವಿಐಎಸ್ಎಲ್ ಉಳಿಸಲು ಪ್ರಧಾನಿ ಮೋದಿ ಮುಂದಾಗಬೇಕು.ಕಾರ್ಖಾನೆ ಉಳಿಸಿ ಕಾರ್ಮಿಕರ ಭವಿಷ್ಯಕ್ಕೆ ಬೆಳಕು ನೀಡುವಂತಾಗಬೇಕು. ಕಾರ್ಖಾನೆ ಮುಚ್ಚಿದ್ದಲ್ಲಿ ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ ಎಂದರು.

ಈ ಸಂದರ್ಭದಲ್ಲಿ ನೂರಾರು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು