ವಿಜಯ ಸಂಘರ್ಷ
ಭದ್ರಾವತಿ: ನಗರದ ನ್ಯಾಯಾಲಯ ರಸ್ತೆ ಕಾಮಗಾರಿ ಅವೈಜ್ಞಾನಿಕ ರೀತಿಯ ನಡೆಸಿದ್ದು ಕೂಡಲೇ ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ರಸ್ತೆಯಲ್ಲಿ ತಾಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಪಂ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳಿರು ವುದರಿಂದ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುತ್ತಿರುತ್ತಾರೆ ಅಲ್ಲದೆ ಗರ್ಭಿಣಿಯರು, ರೋಗಿಗಳು, ವಯಸ್ಸಾದ ಹಿರಿಯ ನಾಗರೀಕರು ಆಸ್ಪತ್ರೆಗೆ ಓಡಾಡಲು ಅನಾನುಕೂಲ ವಾಗಿದೆ. ಅಲ್ಲದೆ ಭಾರೀ ವಾಹನಗಳು ಬಸ್ಸು, ಲಾರಿ, ಟ್ಯಾಕ್ಸಿ, ಆಟೋ ರೀಕ್ಷಾ ಗಳು ದ್ವಿಚಕ್ರ ತಿರುಗಾಡುತ್ತಿದ್ದು ಗುಂಡಿಮಯ ರಸ್ತೆಯಿಂದ ವಾಹನ ಸವಾರರು ಪ್ರಾಣ ಕೈಯಲ್ಲಿಡಿದು ಓಡಾಡುವಂತಾಗಿದೆ.ಆದ್ದರಿಂದ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿ ಕೂಡಲೇ ಸರಿಪಡಿಸಲು ಒತ್ತಾಯಿಸಿದರು.
ಪಕ್ಷದ ಅಧ್ಯಕ್ಷ ಬಿ.ಗಂಗಾಧರ್ ಪ್ರತಿಭಟನೆ ನೇತೃತ್ವವಹಿಸಿದ್ದರು. ಮುಖಂಡರಾದ ಬಿ.ಎಸ್. ಕೃಷ್ಣಪ್ಪ, ಬಿ.ಕೆ. ಗೀತಾ, ಎಸ್.ಎನ್. ನಾಗರಾಜ್ ಜಿ. ಹರೀಶ್, ಆರ್.ಜಗದೀಶ್ ಅಂಬೋರೆ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795