ವಿಜಯ ಸಂಘರ್ಷ
ಭದ್ರಾವತಿ: ಜೆಡಿಎಸ್ ಅಭ್ಯರ್ಥಿ
ಶಾರದಾ ಅಪ್ಪಾಜಿ ಭಾನುವಾರ ನಗರದ ವಿವಿಧ ಕ್ರೈಸ್ತ ದೇವಾಲ ಯಗಳಿಗೆ ಭೇಟಿ ನೀಡಿ ಚರ್ಚ್ ಫಾದರ್ ಗಳ ಆಶೀರ್ವಾದ ಪಡೆದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 40 ವರ್ಷಗಳಿಂದ ಮನೆಯಿಂದ ಹೊರ ಬಾರದೆ ಇದ್ದ ನಮಗೆ ಪತಿ ಎಂ.ಜೆ.ಅಪ್ಪಾಜಿ ಯಾವ ಸಮಸ್ಯೆ ಇಲ್ಲದೆ ಎಲ್ಲ ಸಮುದಾಯದ ಜನರೊಂದಿಗೆ ಸಮಾನತೆ ಕಂಡಿದ್ದರ ಉದ್ದೇಶದಿಂದ ಎಲ್ಲವನ್ನು ಅವರೇ ನಿಬಾಯಿಸುತ್ತಿದ್ದ ಪರಿಣಾಮ ಸಮಸ್ಯೆ ಇರುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ
ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಪ್ರೇರಣೆಯಿಂದ ಅನಿವಾರ್ಯವಾಗಿ ಸಮಾಜ ಸೇವೆಗೆ ಬರುವಂತೆ ಮಾಡಿದೆ. ಅಪ್ಪಾಜಿ ಮಾರ್ಗದಲ್ಲಿ ನಡೆದು ಅವರ ಹಾಗೇ ಎಲ್ಲಾ ವರ್ಗದ ಸಾರ್ವಜನಿಕರಿಗೆ ಸೇವೆ ಮಾಡಲು ಅವಕಾಶ ನೀಡುವಂತೆ ಕ್ರೈಸ್ತ ಭಕ್ತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಆಮೋಸ್, ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ಮಧುಸೂದನ್ ಉಪಾಧ್ಯಕ್ಷ ಜೆ.ಭಾಸ್ಕರ್ ಬಾಬು ಮುಖಂಡರಾದ ಟಿ.ಗಾಬ್ರೇಲ್,ಭಾಗ್ಯಮ್ಮ ಮುಂತಾದವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795