ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕು ಕಚೇರಿ ರಸ್ತೆ ಮುಂಭಾಗದ ರಸ್ತೆ ಕಾಮಗಾರಿ ಕಳಪೆ ಯಿಂದ ಕೂಡಿರುವ ರಸ್ತೆಯಾಗಿದ್ದು ಕೂಡಲೇ ಸರಿಪಡಿಸಲು ಅಗ್ರಹಿಸಿ ಕಾಂಗ್ರೇಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಗಂಗಾ ಧರ್ ನೇತೃತ್ವದಲ್ಲಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಬಿ. ಗಂಗಾಧರ್, ಇದೆ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಗೆ ಆಗಮಿ ಸುವ ಗರ್ಭಿಣಿಯರು, ರೋಗಿಗಳು ಆಗಮಿಸಲಿದ್ದು, ವಯಸ್ಸಾದ ಹಿರಿಯ ನಾಗರೀಕರು, ಭಾರೀ ವಾಹನಗಳು ಬಸ್ಸು, ಲಾರಿ, ಬ್ಯಾಕ್ಸಿ, ಆಟೋ ರೀಕ್ಷಾ ಗಳು ದ್ವಿಚಕ್ರ ವಾಹನ ತಿರುಗಾಡು ತ್ತಿರುವುದರಿಂದ ಈಗಾಗಲೇ ಹಾಕಲಾ ಗಿರುವ ರಸ್ತೆ ಕಾಂಕ್ರಿಟ್ ಕಿತ್ತು ಬಂದಿದೆ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಿ ಕೂಡಲೇ ರಸ್ತೆ ಸರಿಪಡಿಸಲು ಸೂಚಿ ಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ರಾದ ಬಿ. ಎಸ್. ಪ್ರಸನ್ನ, ಮಂಜು ನಾಥ್, ಆರ್. ಜಗದೀಶ್, ಬಿ.ಕೆ. ಗೀತಾ, ಎಸ್.ಎನ್.ನಾಗರಾಜ್, ಜಗದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.