ವಿಜಯ ಸಂಘರ್ಷ
ಶಿಕಾರಿಪುರ: ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಐ ಕೇರ್ ಸಂಸ್ಥಾಪಕರು ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ರವರ ಹುಟ್ಟುಹಬ್ಬದ ಪ್ರಯುಕ್ತ ಸಂಘಟನೆಯ ಸದಸ್ಯರು ಹಾಗೂ ಅಭಿಮಾನಿಗಳು ಪಟ್ಟಣದ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಚಿತ್ರನಟಿ ಅನುಷ್ಕಾ ಶೆಟ್ಟಿ ರವರ ಸಹೋದರ ರಾಗಿದ್ದು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾಗಿ ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಕರಾಗಿ ದೇಶಿಯ ಕ್ರೀಡೆಗಳಿಗೆ ನಾಡಿನ ಪ್ರತಿಭೆಗಳನ್ನು ದೇಶಕ್ಕೆ ಪರಿಚಯಿಸುವ ಪ್ರೋತ್ಸಾಹಕರಾಗಿದ್ದಾರೆ.
ನಾಡಿನಲ್ಲಿ ನೀರು ಹಾಗೂ ಹಸಿರು ಕ್ರಾಂತಿಗಾಗಿ ಐ ಕೇರ್ ಸಂಸ್ಥೆ ಸ್ಥಾಪಿಸಿ ದವರಾಗಿದ್ದಾರೆ. ಸಂಘಟನೆಯ ಮೂಲಕ ನಾಡು ನುಡಿ ರಕ್ಷಣೆ ಸೇರಿದಂತೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಮೂಲಕ ನೊಂದವರ ಧ್ವನಿಯಾಗಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ಗುಣ ರಂಜನ್ ಶೆಟ್ಟಿ ರವರ ಹುಟ್ಟುಹಬ್ಬ ವನ್ನು ಹಲವು ಜಿಲ್ಲೆ, ತಾಲೂಕುಗಳಲ್ಲಿ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣು ಹಂಪಲು ನೀಡುವ ಮೂಲಕ, ಅನಾಥ ಆಶ್ರಮಗಳಲ್ಲಿ ಅನ್ನದಾನ ಮಾಡುವ ಮೂಲಕ ವಿಶಿಷ್ಟವಾಗಿ ಅರ್ಥಪೂರ್ಣ ಆಚರಣೆ ನಡೆಸಲಾಗುತ್ತಿದ್ದುಮುಂದಿನ ದಿನಗಳಲ್ಲಿ ಜಿಲ್ಲೆಯ ವತಿಯಿಂದ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್ , ಶಿವಯ್ಯ ಎನ್ ಶಾಸ್ತ್ರಿ ಆರ್ ಪಿ ಮಂಜುನಾಥ್ ಇಮ್ರಾನ್ ಸುರೇಶ್ ವಕೀಲರಾದ ಮುಕ್ತಿಯರ್, ರಾಜು ನಾಯ್ಕ್ , ನವೀನ್ ಪುನೀತ್, ಸಲ್ಮಾನ್ ಸೇರಿದಂತೆ ಹಲವರಿದ್ದರು.
(ವರದಿ ಹುಲಿಗಿ ಕೃಷ್ಣ ಶಿಕಾರಿಪುರ )
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795