ಕೆಂಚೆನಹಳ್ಳಿ ಗ್ರಾಮದಲ್ಲಿ ಅಪ್ಪಾಜಿ ಅಭಿವೃದ್ಧಿ ಪರ್ವ

 ವಿಜಯ ಸಂಘರ್ಷ



ಭದ್ರಾವತಿ: ತಾಲ್ಲೂಕಿನ ಕೆಂಚೇನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಎಂ. ಜೆ. ಅಪ್ಪಾಜಿ ಅಭಿವೃದ್ಧಿ ಪರ್ವ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ  ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಶಾರದಾ ಅಪ್ಪಾಜಿ ಮಾತನಾಡಿ,  ಕ್ಷೇತ್ರದಲ್ಲಿ ಹಿಂದಿನ ಶಾಸಕ ಅಪ್ಪಾಜಿ ಮಾಡಿರುವ ಅನೇಕ ಅಭಿವೃದ್ಧಿ ಕಾರ್ಯಗಳ ಮೇಲೆ ಈ ಭಾರಿ ತಮ್ಮ ಮತಗಳನ್ನ ನೀಡಿ

ಇಷ್ಟು ಬೃಹತ್ ಪ್ರಮಾಣದಲ್ಲಿ ಸೇರಿರುವ ನಿಮ್ಮ ಮಧ್ಯೆ ಇನ್ನೂ ಅಪ್ಪಾಜಿ ಇದ್ದಾರೆಂದರು.


ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ನೀಡದೆ. ಒಸಿ, ಮಟ್ಕಾ ಇನ್ನಿತರ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡುತ್ತಿರುವವರನ್ನು ಮನೆಗೆ ಕಳುಹಿಸುವಂತೆ ಮಾಡಬೇಕಿದೆ. ಅಲ್ಲದೆ ಈ ಭಾರಿ ಕ್ಷೇತ್ರದ ಜನತೆಗೆ ಶಾಂತಿ, ನೆಮ್ಮದಿ ಬದುಕಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.


ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಆರ್.ಕರುಣಾ ಮೂರ್ತಿ, ಯುವ ಮುಖಂಡರಾದ ಅಮೋಸ್, ಅಜಿತ್ ಅಪ್ಪಾಜಿ, ಮಧುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು