ಪಂಪ ಸರ್ವಕಾಲಕ್ಕೂ ಸಲ್ಲುವ ಕವಿ: ಡಾ.ಬಿ.ಎಂ.ಜಯಶೀಲ

ವಿಜಯ ಸಂಘರ್ಷ
ಸಾಗರ: ಕನ್ನಡದ ಆದಿಕವಿ ಪಂಪ ತನ್ನ ಸಾಹಿತ್ಯದಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಕೊಟ್ಟಿರುವ ಏಕೈಕ ಕವಿಯಾಗಿದ್ದಾನೆ. ಕನ್ನಡದ ಅಗ್ರಮಾನ್ಯ ಕವಿಯಾದ ಪಂಪ ಸರ್ವಕಾಲಕ್ಕೂ ಸಲ್ಲುವ ಕವಿ ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಬಿ.ಎಂ. ಜಯಶೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲ್ಲೂಕಿನ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹೊಂಬುಜ ಜೈನ ಮಠ ಹುಂಚದ ದತ್ತಿದಾನದಲ್ಲಿ ನಡೆದ "ಪಂಪ ಜಯಂತೋ ತ್ಸವ" ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪಂಪ ತನ್ನ ಕೃತಿಯಲ್ಲಿ ಜೈನ ಧರ್ಮದ ಪ್ರಸ್ತುತಿ, ಪ್ರಚಾರ, ಮಾನವನ ಮಹೋನ್ನತ ಚರಿತ್ರೆಯನ್ನು ಪರಿಚಯಿಸಿದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪನ ಕೃತಿಯಲ್ಲಿ ಕಾವ್ಯ ಧರ್ಮವೂ ಇದೆ, ಧರ್ಮವೂ ಇದೆ ಹೀಗಾಗಿ ಪಂಪ ಶ್ರೇಷ್ಠ ಕವಿಯಾಗಿ ಮೆರೆದಿದ್ದಾನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ. ಮ.ನರಸಿಂಹ ಪ್ರಾಸ್ತಾವಿಕ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ,ಸಾ,ಪ ಸಂಘಟನಾ ಕಾರ್ಯದರ್ಶಿ ಎನ್. ಮಂಜುನಾಥ್ ಕಾಮತ್, ಹೋಬಳಿ ಘಟಕದ ಅಧ್ಯಕ್ಷ ಆರ್ ನಾಗಭೂಷಣ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರತ್ನಾಕರ ಕುನುಗೋಡು,ಹ.ಅ. ಪಾಟೀಲ್, ರತ್ನಯ್ಯ.ಡಿ. ಗಣೇಶ್, ಸತೀಶ್ ಮುಂತಾದ ವರು ಕಾರ್ಯಕ್ರಮದಲ್ಲಿ ಜಿಲ್ಲಾ ಉಪಸ್ಥಿತರಿದ್ದರು.

ಮಾನಸ ಪ್ರಾರ್ಥಿಸಿದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ರತ್ನಾಕರ ಕುನು ಗೋಡು ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಮಂಜುಳಾ ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು