ವಿಜಯ ಸಂಘರ್ಷ
ಎಷ್ಟೊಂದು ಅವತಾರ ಹಗಲು ಇರುಳಿಗೆ..
ಊಸರವಳ್ಳಿಯಂತೆ ಅಂಗಿಕಳಚುವ ಆಟದಲ್ಲಿ..
ಇಂದು ಬೇವಿನ ಸೀರೆ.. ನಾಳೆಗದು ರೇಷ್ಮೆ.
ಮರೆತೇ ಹೋಯ್ತು ತಾ ಬಂದ ದಾರಿ..
ಎಷ್ಟು ಕರೆದರೂ ಕೇಳಿಸಿಕೊಳ್ಳದ ಜಾಣಮೌನ
ಅರ್ದ ಬೆಂದ ನಗು...
ಒಳಗೊಳಗೇ ಶಕುನಿಯ ಕುತಂತ್ರ..
ಅವರಂತೆ ಇವರಂತೆ ಅದೇ ನಗು..
ಎಷ್ಟೊಂದು ಸಂಬಂಧಗಳು..
ಆ ನಗುವಿಗೆ.. ಕುಹುಕ.. ದಾನಕ್ಕೆ
ಬಾಯಿ ಮುಚ್ಚಿಸಲು ಕತ್ತು ಹಿಸುಕಿ.
ನಿಧಾನವಾಗಿ ಸಾಯಿಸಲು..
ಉಚಿತವೆಂಬ ಡ್ರಗ್ಸ್ ಆತ್ಮಹತ್ಯೆ ಅಲ್ಲವೇ..
ಈಗೀಗ ಕೈಗೆ ಕಾಸಿಟ್ಟರಷ್ಟೇ ಓಟು..
ಕುರುಡರೆದುರು ಎಷ್ಟಿದೆ.. ಎನ್ನುವವರಾರು
ನಿರೀಕ್ಷೆಗಳು ನೂರು...
ಜಾತಿಗಳ ಲೆಕ್ಕ.. ಆಟಕ್ಕುಂಟು ಲೆಕ್ಕಕ್ಕಿಲ್ಲ
ಯಾರ ದುಡ್ಡು ಯಾರಿಗೆ ಊಟ
ಕೊನೆಗೆ ಗೆಲ್ಲುವುದು ನೋಟಾ...
ಜಾಲಿಯ ಮರದಲ್ಲಿ ಕರುಣೆ ಯಿಲ್ಲದೆ ಮುಳ್ಳು
ನಮ್ಮ ಕೈ ಎಚ್ಚರವಾಗಿರಬೇಕು..
ಬ್ರಷ್ಟಾಚಾರ ಹುಟ್ಟಿಸಿ ಮಟ್ಟ ಹಾಕುವ
ಎನ್ನುವುದು ಎಷ್ಟು ಸರಿ...
ಆದರೂ ಗೆಲ್ಲಿಸಿ.. ಪ್ರಾಮಾಣಿಕರನು
ಜನಪರ ಪ್ರಗತಿಪರ ನಾಯಕರನು
ಮತವ ಚಲಾಯಿಸಿ.. ಪಥವ ನಿರ್ಧರಿಸಿ..
ರಂಗನಾಥ ಕ ನಾ ದೇವರಹಳ್ಳಿ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795