ವಿಜಯ ಸಂಘರ್ಷ
ತೀರ್ಥಹಳ್ಳಿ: ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ತೀರ್ಥಹಳ್ಳಿ ತಾಲೂಕಿನ ಗ್ರಾಮವೊo ದರಲ್ಲಿ ಚುನಾ ವಣೆ ಬಹಿಷ್ಕಾರದ ಕೂಗು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದಿದ್ದಾರೆ.
ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಮಜಿರೆ ಮುನ್ನೂರು ಗ್ರಾಮದ ಗದ್ದೆ, ತೋಟ ಗಳಿಗೆ ಸಂಪರ್ಕಕ್ಕೆ ರಸ್ತೆ ಇಲ್ಲವಾಗಿದೆ. ಇದರಿಂದ ರೈತರು ತಮ್ಮ ಜಮೀನಿಗೆ ಟಿಲ್ಲರ್, ಟ್ರಾಕ್ಟರ್, ಪಿಕಪ್ ವಾಹನ ಸಾಗಿಸಲು ಸಾಧ್ಯವಾಗುತ್ತಿಲ್ಲ.
ಜಮೀನಿನಲ್ಲಿ ಬೆಳೆ ಬೆಳೆಯುವುದಕ್ಕೆ ಮತ್ತು ಫಸಲು ಸಂಗ್ರಹಣೆಗೆ ಯಂತ್ರ ಗಳನ್ನು ಬಳಸದ ಸ್ಥಿತಿ ನಿರ್ಮಾಣ ವಾಗಿದೆ. ತಲೆಯ ಮೇಲೆ ಸಾಮಾಗ್ರಿ ಗಳನ್ನು ಹೊತ್ತುಕೊಂಡು ಜಮೀನನ್ನು ಸಂಪರ್ಕಿಸುವುದು ಬಹಳ ಕಷ್ಟವಾ ಗಿದೆ. ಅನೇಕರು ತಮ್ಮ ಜಮೀನಿ ನಲ್ಲಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದು ತಕ್ಷಣ ಸ್ಪಂದಿಸುವಂತೆ ತಾಲ್ಲೂಕು ಆಡಳಿ ತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರು ಪ್ರಯೋಜವಾಗಿಲ್ಲ. ಹೀಗಾಗಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವು ದಾಗಿ ಗ್ರಾಮಸ್ಥರು ತೀರ್ಮಾನಿ ಸಿದ್ದೇವೆ ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.
ಸ.ನಂ. 34 ರಿಂದ ಪ್ರಾರಂಭವಾಗಿ ಸ.ನಂ. 27, 26, 24, 23, 39, 21 ಮತ್ತು 38ರ ಜಮೀನುಗಳಿಗೆ ಓಡಾಡ ಲು ಅನುಕೂಲ ವಾಗುವಂತೆ 20 ಅಡಿ ಅಗಲದ ರಸ್ತೆಯನ್ನು ಬಿಟ್ಟುಕೊಂಡಿ ರುತ್ತೇವೆ. ಈ ರಸ್ತೆಯಲ್ಲಿ ಟಿಲ್ಲರ್, ಟ್ರಾಕ್ಟರ್, ಪಿಕಪ್‌ಗಳಲ್ಲಿ ಗೊಬ್ಬರ ಇತ್ಯಾದಿ ಬೇಸಾಯದ ಪರಿಕರಗಳನ್ನು ಅವರವರ ತೋಟಗಳಿಗೆ ಸಾಗಿಸು ವುದು, ಫಸಲು ಮನೆಗೆ ಸಾಗಿಸುವುದು ಹಿಂದಿ ನಿಂದಲೂ ನಡೆದುಕೊಂಡು ಬಂದಿರುತ್ತೆ.
ಸ.ನಂ. 27ರಲ್ಲಿ 0.02 ಗುಂಟೆ ಖರಾಬು 0.02 ಗುಂಟೆ ಸರ್ಕಾರಿ ಜಾಗ ಅತಿಕ್ರ ಮಣ ಮಾಡಿಕೊಂಡಿದ್ದನ್ನು ಸ್ಥಳೀಯ ಕಂದಾಯ ಅಧಿಕಾರಿಗಳು ತೆರವು ಗೊಳಿಸಿ ನಮಗೆ ದಾರಿ ಬಿಡಿಸಿಕೊಟ್ಟಿ ರುತ್ತಾರೆ. ಆದರೆ ಸ.ನಂ. 24 ಮತ್ತು 39ರ ಸಾಗುವಳಿದಾರರು ಎರಡು ಸರ್ವೆ ನಂಬರ್‌ಗಳಲ್ಲಿ ರಸ್ತೆಗೆ ಜಾಗ ಬಿಟ್ಟು ಕೊಡದ ಕಾರಣದ ರೈತರಿಗೆ ತೊಂದರೆಯಾಗಿದೆ.
ಈಗಾಗಲೇ ಸ.ನಂ. 24 ಮತ್ತು 39ರ ಗಡಿ ಯಲ್ಲಿ ನಿಂತಿದೆ. ಅಲ್ಲಿಂದ ಮುಂದೆ ಸ.ನಂ. 23,21,38ರ ಜಮೀನುಗಳ ರೈತರು ತಮ್ಮ ಜಮೀನುಗಳಲ್ಲಿ ರಸ್ತೆ ಬಿಟ್ಟುಕೊಂಡಿರುವು ದಾಗಿ ತಿಳಿಸಿದ್ದಾರೆ. ಸ.ನಂ. 24 ಮತ್ತು 39ರ ನಡುವೆ ರಸ್ತೆ ಬಿಡದೇ ಇರುವುದರಿಂದ ಇಲ್ಲಿನ ಎಲ್ಲಾ ರೈತರಿಗೂ ತೀವ್ರ ತೊಂದರೆ ಯಾಗು ತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸ ಲಾಗಿದೆ ಇದರ ಬಗ್ಗೆ ಈಗ ಎರಡು ತಿಂಗಳ ಹಿಂದೆ ತಹಶೀಲ್ದಾರ್ ರವರಿಗೆ ಮನವಿ ಮಾಡಿ ಕೊಂಡಿದ್ದು, ನಮ್ಮ ಮನವಿಯನ್ನು ಇಲ್ಲಿಯವರೆಗೆ ಸ್ಪಂದಿಸಿ ರುವುದಿಲ್ಲ. ಸ.ನಂ. 24 ಮತ್ತು 39ರ ಸಾಗುವಳಿದಾರರು ಈ ಎರಡು ಸರ್ವೆ ನಂಬರ್‌ಗಳ ನಡುವೆ ರಸ್ತೆಗೆ ಜಾಗ ಬಿಡದೇ ಇರುವುದರಿಂದ ನಮಗೆ ಈಗಿನ ಕಾಲಮಾನಕ್ಕೆ ತಕ್ಕಂತೆ ಯಾಂತ್ರೀಕೃತ ಕೃಷಿ ಅವಲಂಬಿಸಿ ಕೃಷಿ ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾ ಶವಾಗುತ್ತಿಲ್ಲವಾದ ಕಾರಣ ಗ್ರಾಮಸ್ಥ ರು ಹಾಗೂ ರೈತರ ಕನಿಷ್ಟ ಅವಶ್ಯ ಕತೆಗಳನ್ನು ಪೂರೈಸದ ಸರ್ಕಾರದ ಹಾಗೂ ಅಧಿಕಾರಿಗಳ ನೀತಿಯನ್ನು ಖಂಡಿಸಿ ವಿಧಾನಸಭಾ ಚುನಾವಣೆ ಯಲ್ಲಿ ಮತದಾನವನ್ನು ಬಹಿಷ್ಕರಿಸು ತ್ತೇವೆ ಗ್ರಾಮಸ್ಥರು ಸಹಿ ಹಾಕಿ ಜಿಲ್ಲಾಧಿಕಾರಿಗೆ ಮತ ಬಹಿಷ್ಕಾರದ ಪತ್ರ ಬರೆದಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :9743225795
Tags:
Tirthahalli News