ಸಂಜೆ ಹೊತ್ತಿನಲ್ಲಿಯೇ ಮನೆ ಯೊಂದಕ್ಕೆ ನುಗ್ಗಿ ದರೋಡೆ..?

ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಇಲ್ಲಿನ ಹೊಸಳ್ಳಿ ತೋಟದ ಮನೆಯ ಸಮೀಪ ಸಂಜೆ ಹೊತ್ತಿನಲ್ಲಿಯೇ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಲಾಗಿದೆ. ಕಳೆದ ಮೂರನೇ ತಾರೀಖು ನಡೆದ ಘಟನೆ ಇದಾಗಿದ್ದು, ನಾಲ್ಕರಂದು ಈ ಸಂಬಂಧ ಕೇಸ್ ದಾಖ ಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಆತಂಕ ಮೂಡಿಸುತ್ತಿದೆ. ಪ್ರಕರಣದ ವಿಚಾರವಾಗಿ  ಪೊಲೀಸ್ ಕೇಸ್​ ಆಗಿದ್ದು ತನಿಖೆಯು ನಡೆಯುತ್ತಿದೆ.

ನಡೆದಿದ್ದೇನು?

ಮೂರನೇ ತಾರೀಖು ಏಳುವರೆ ಸುಮಾ ರಿಗೆ, ತಾಯಿ ಮಗಳು ಮೊಮ್ಮಗು ಇದ್ದ ಮನೆಯೊಂದರ ಬಾಗಿಲನ್ನ ಅಪರಿಚಿತರು ಬಡಿದಿದ್ದಾರೆ. ಯಾರು ಬಾಗಿಲು ತಟ್ಟಿದ್ದಾರೆ ಎಂದು ತೆರೆದು ನೋಡಿದಾಗ, ದುಷ್ಕರ್ಮಿ ಗಳು ಅವರ ಮೇಲೆ ದಾಳಿ ಮಾಡಿದ್ದಾರೆ.
ಕೈಗೆ ಗ್ಲೌಸ್​ ಹಾಕಿಕೊಂಡು ಮುಖಕ್ಕೆ ಮುಸುಕು ಕಟ್ಟಿಕೊಂಡಿದ್ದ ಆರೋಪಿಗಳು, ತಾಯಿ ಹಾಗೂ ಮಗಳ ಕೈ ಕಟ್ಟಿ ಹಾಕಿ, ಬೀರುವಿನಲ್ಲಿದ್ದ ಹಣ, ಒಡವೆಯನ್ನ ದೋಚಿದ್ಧಾರೆ. ಆನಂತರ ಮಗುವಿನ ಕುತ್ತಿಗೆಗೆ ಚಾಕು ಹಿಡಿದು, ತಾಯಿ ಮಗಳ ಮೈಮೇಲಿದ್ದ ಒಡವೆಗಳನ್ನ ನೀಡುವಂತೆ ಕೇಳಿದ್ದಾರೆ. ಅಲ್ಲದೆ ಕಿರುಚಿದರೇ ಸಾಯಿಸುತ್ತೇವೆ ಎಂದು ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸದ್ಯ ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಭದ್ರಾವತಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

 ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು