ವಿಜಯ ಸಂಘರ್ಷ
ಭದ್ರಾವತಿ: ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿ.ಕೆ.ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು
ಎಂದು ಭದ್ರಾವತಿಯ ಬಂಜಾರ ರೈತ
ಸಂಘ ಹಾಗೂ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ರಾಜ್ಯ ಬಂಜಾರ ರೈತ ಸಂಘದ ಅಧ್ಯಕ್ಷ
ಕೃಷ್ಣಾನಾಯ್ಕ ಮಾತನಾಡಿ, ಸಂಗಮೇಶ್ ಅವರು ಏಳು ಬಾರಿ ಸ್ಪರ್ಧಿಸಿ ನಾಲ್ಕು
ಬಾರಿ ಗೆದ್ದಿದ್ದಾರೆ. ಭದ್ರಾವತಿಯ ಇತಿಹಾಸ ದಲ್ಲಿ ಇಲ್ಲಿಯವರೆಗೆ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ಈ ಬಾರಿಯಾದರೂ
ಹಿರಿಯರಾದ ಬಿ.ಕೆ.ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರು ಭದ್ರಾವತಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ಸಂಗಮೇಶ್ ಅವರನ್ನು ಗೆಲ್ಲಿಸಿ.
ಅವರಿಗೆ ಸಚಿವ ಸ್ಥಾನ ನೀಡುವುದು ನಮ್ಮ ಜವಾಬ್ದಾರಿ ಎಂದಿದ್ದರು. ಈಗ ಗೆಲ್ಲಿಸಿದ್ದೇವೆ. ಕೊಟ್ಟ ಮಾತಿನಂತೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಕಲ್ಲಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಆನಂದ್ ಮಾತನಾಡಿ, ಸಂಗಮೇಶ್ ಅವರು ಕ್ಷೇತ್ರದ
ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಚಿವ ಸ್ಥಾನಕ್ಕೆ
ಖಾಲಿ ಇರುವ ಕ್ಷೇತ್ರ ಎಂದರೆ ಭದ್ರಾವತಿ
ಮಾತ್ರ. ಕಾರ್ಖಾನೆಗಳ ಅಭಿವೃದ್ಧಿ ಸೇರಿ ದಂತೆ ಮತ್ತಷ್ಟು ಅಭಿವೃದ್ಧಿಗಾಗಿ ಅವರಿಗೆ
ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ
ಇಷ್ಟರಲ್ಲಿಯೇ ಭದ್ರಾವತಿಯಿಂದ ಕಾಂಗ್ರೆಸ್
ಮುಖoಡರ ನಿಯೋಗ ಹೈಕಮಾಂಡ್ ಬಳಿ
ತೆರಳಿ ಮನವಿ ಮಾಡುತ್ತೇವೆ. ಅವರಿಗೆ
ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ
ನಮ್ಮದು. ಒಂದು ಪಕ್ಷ ಮಾತಿಗೆ ತಪ್ಪಿದರೆ ಭದ್ರಾವತಿಯಲ್ಲಿ ಕಾಂಗ್ರೆಸ್ ಮುಖಂಡರ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ
ಕವಿತಾಬಾಯಿ, ಸೋಮಾ ನಾಯ್ಕ, ಕೃಷ್ಣಾ ನಾಯ್ಕ,ರಾಮಾ ನಾಯ್ಕ, ಗಿರೀಶ್, ಬೋಟ್ಯಾ ನಾಯ್ಕ, ಪ್ರವೀಣ್
ಮುಂತಾದವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
Press meet