ಜೂ.12: ನಗರಸಭೆಸಾಮಾನ್ಯ ಸಭೆ

ವಿಜಯ ಸಂಘರ್ಷ
ಭದ್ರಾವತಿ: ವಿಧಾನಸಭಾ ಚುನಾವಣೆ
ಪ್ರಕ್ರಿಯೆಗಳು ಮುಕ್ತಾಯಗೊಂಡು ನೂತನ ಸರ್ಕಾರ ರಚನೆಯಾದ ನಂತರ ಇದೀಗ ನಗರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದು,
ಜೂ.12ರಂದು ಬೆಳಿಗ್ಗೆ 11 ಗಂಟೆಗೆ
ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ವಹಿಸಲಿದ್ದಾರೆ.

ಈ ಹಿಂದೆ ಮಾ.18 ರಂದು ಸಾಮಾನ್ಯ
ಸಭೆ ನಡೆದಿದ್ದು, ಇದೀಗ ಸುಮಾರು 2 ತಿಂಗಳ ನoತರ ನಡೆಯುತ್ತಿದೆ. ಈಗಾ ಗಲೇ ಹಲವಾರು ಸಮಸ್ಯೆಗಳು ನಗರಸಭೆ ವ್ಯಾಪ್ತಿಯಲ್ಲಿ ಉಲ್ಬಣಗೊಂಡಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯಸಭೆ ಸಾರ್ಥಕಗೊಳ್ಳ ಬೇಕು. ಸದಸ್ಯರು ತಪ್ಪದೇ ಸಭೆಗೆ ಹಾಜ ರಾಗುವಂತೆ ಪೌರಾಯುಕ್ತ ಮನು ಕುಮಾರ್ ಕೋರಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು