ವಿಜಯ ಸಂಘರ್ಷ
ಸಾಗರ: ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸುವ ಕೇಂದ್ರವಾಗಿ ಕಾರ‍್ಯ ನಿರ್ವಹಿಸಲಿದೆ, ಯಾರೂ ಕೂಡ ಮುಕ್ತ ವಾಗಿ ಬಂದು ತಮ್ಮ ಅಹವಾಲು ಸಲ್ಲಿಸ ಬಹುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣ ದಲ್ಲಿ ಶಾಸಕರ ನೂತನ ಕಚೇರಿ ಉದ್ಘಾ ಟನಾ ಕಾರ‍್ಯಕ್ರಮದಲ್ಲಿ ಅವರು
ಮಾತನಾಡಿದರು.
ಕಚೇರಿಯಲ್ಲಿ ನಾನಿದ್ದರೂ ಇಲ್ಲದಿದ್ದರೂ ನಮ್ಮ ಸಿಬ್ಬಂದಿಗಳು ನಿಮ್ಮನ್ನು ಗೌರವ ವಾಗಿ ನೋಡಿಕೊಳ್ಳಲಿದ್ದಾರೆ, ಮತ್ತು ನೀವು ಕೊಟ್ಟ ಯಾವುದೇ ಅರ್ಜಿ ಗಳನ್ನು ಖುದ್ದು ನಾನು ಪರಿಶೀಲಿಸುವ ಮೂಲಕ ಬಡವರ ಧ್ವನಿಯಾಗಿ ಅವರಿಗೆ ನ್ಯಾಯಕೊಡಿಸುವ ಕೆಲಸ ಮಾಡಲಿದ್ದೇನೆ ಎಂದರು.
ಇದಕ್ಕೂ ಮುನ್ನ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ನೂತನ ಶಾಸಕರ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795